Follow Us On

Google News
Uttara Kannada
Trending

ಹೊಸ ವರ್ಷಾಚರಣೆಗೆ ಕಡಿವಾಣ: ಉತ್ತರಕನ್ನಡದ ಹಲವೆಡೆ ನಿಷೇಧಾಜ್ಞೆ

ಜಿಲ್ಲಾಧಿಕಾರಿಗಳ ಮಹತ್ವದ ಆದೇಶದಲ್ಲೇನಿದೆ ನೋಡಿ
ಜಿಲ್ಲೆಯ ಕರಾವಳಿ ಭಾಗದ ಬೀಚ್ ಗಳಲ್ಲಿ, ಐತಿಹಾಸಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗಿಲ್ಲ ಅವಕಾಶ

ಕಾರವಾರ: ಕರೊನಾ ಕಾರಣದಿಂದಾಗಿ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಡಿಸೆಂಬರ್ 31 ರ ಸಂಜೆಯಿAದ ನಿಷೇಧಾಜ್ಞೆ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಲ್ಲಿ ಡಿಸೆಂಬರ್ 31 ರ ಸಂಜೆ 4 ಗಂಟೆಯಿoದ ಜನವರಿ 1 ರ ಬೆಳಿಗ್ಗೆ 6 ಗಂಟೆಯ ವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ.

ಜಿಲ್ಲೆಯಲ್ಲಿ ಡಿಸೆಂಬರ್ 31 ರಂದು ನಡೆಯಲಿರುವ ಹೊಸ ವರ್ಷಾಚರಣೆ ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ಕರಾವಳಿ ಭಾಗದ ಬೀಚ್ ಗಳಲ್ಲಿ, ಐತಿಹಾಸಿಕ ಸ್ಥಳಗಳು, ಜನಸಂದಣಿ ಪ್ರದೇಶಗಳು ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಾರ್ವಜನಿಕ ಮೆರವಣಿಗೆ, ವಿಜಯೋತ್ಸವ, ಪ್ರತಿಭಟನಾ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸದಂತೆ ಕ್ರಮವಾಗಿ ಡಿಸೆಂಬರ್ 31 ರಂದು ಸಂಜೆ 4 ಗಂಟೆಯಿoದ ಜನವರಿ 1 ರ ಬೆಳಿಗ್ಗೆ 6 ಗಂಟೆಯ ವರೆಗೆ ಭಾರತೀಯ ದಂಡ ಸಂಹಿತೆಯ ಕಲಂ 144 ರಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಆದರೆ ಈ ಆದೇಶವು ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಧಾರ್ಮಿಕ ಹಬ್ಬ, ಹರಿದಿನಗಳು ಮತ್ತು ಶವಸಂಸ್ಕಾರಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ. ಹರೀಶ ಕುಮಾರ್. ಕೆ. ಅವರು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ಮದುವೆ ಆಗುತ್ತಿಲ್ಲವೇ? ಉದ್ಯೋಗ ಸಮಸ್ಯೆಯೇ? ಇಲ್ಲಿದೆ ಪರಿಹಾರ

ದೈವಜ್ಞ ವಿದ್ಯಾಭೂಷಣ ಪ್ರಶಸ್ತಿ ವಿಜೇತರು, ದುರ್ಗಾದೇವಿ ಉಪಾಸಕರಾದ ಪಂಡಿತ ಶ್ರೀ ವಿ.ರಾಘವೇಂದ್ರ ರಾವ್ ಶಾರ್ಮಾ ಅವರು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾರೆ. ಇವರು ಕಾಶಿಯಲ್ಲಿ ಜ್ಞಾನ ತಪಸ್ಸಿನಿಂದ ಯಂತ್ರ-ಮoತ್ರ-ವಾಕ್ಯಸಿದ್ಧಿ-ಸoಪಾದಿಸಿದ್ದು, ನೀವು ದೂರವಾಣಿ ಮೂಲಕ ಸಂಪರ್ಕಿಸಿ, ಪರಿಹಾರ ಕಂಡುಕೊಳ್ಳಬಹುದು. ಕೂಡಲೇ ಸಂಪರ್ಕಿಸಿ: 9440269990

Back to top button