ಮಾಹಿತಿ
Trending

ಬಾಸಗೋಡದ ಹೆಸರಾಂತ ಉದ್ದಿಮೆದಾರ ವಿ.ಆರ್.ನಾಯಕ ವಿಧಿವಶ

  • ಚೇತಕ್ ಸವಾರ : ವಿದೇಶಯಾನಿ
  • ಕರಾವಳಿ ಮಿನರಲ್ಸ್ ಎಂಡ್ ಪ್ರೊಸಸಿಂಗ ಇಂಡಸ್ಟ್ರೀಸ್ ಮಾಲಕ

ಅಂಕೋಲಾ : ಬಾಸಗೋಡದ ಹೆಸರಾಂತ ಉದ್ದಿಮೆದಾರರಾಗಿದ್ದ ವಿಠ್ಠಲ್ ಆರ್.ನಾಯಕ (75) ಸೋಮ ವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಬಹು ವರ್ಷಗಳ ಹಿಂದೆಯೇ ಗ್ರಾಮೀಣ ಪ್ರದೇಶದಲ್ಲಿ ಕರಾವಳಿ ಮಿನರಲ್ಸ್ ಎಂಡ್ ಪ್ರೊಸಸಿಂಗ ಇಂಡಸ್ಟ್ರೀಸ್ ತೆರೆದು, ಸಮುದ್ರ ಚಿಪ್ಪುಗಳ ಸಂಸ್ಕರಣಾ ಘಟಕ ಮತ್ತು ಕುಕ್ಕಟ್ಟ ಉದ್ಯಮ ಆಹಾರ ಘಟಕ ಆರಂಭಿಸಿ ಹಲವರು ಜನರಿಗೆ ಉದ್ಯೋಗ ನೀಡಿದಲ್ಲದೇ ತಮ್ಮ ವ್ಯವ ಹಾರವನ್ನು ದೂರದ ಸಾಂಗ್ಲಿ, ಸೊಲ್ಲಾಪುರ, ಮಹರಾಷ್ಟ್ರಕ್ಕೂ ವಿಸ್ತರಿಸಿ, ಉದ್ಯಮ ರಂಗದಲ್ಲಿ ಹೆಸರುವಾ ಸಿಯಾಗಿದ್ದರು.

ಅಪ್ಪಟ್ಟ ಕ್ರಿಕೆಟ್ ಪ್ರೇಮಿಯಾಗಿದ್ದ ಇವರು ಊರಿನ ಸುತ್ತಮುತ್ತಲಿನ ಹತ್ತಾರು ವಿಧಾಯಕ ಕಾರ್ಯಗಳಿಗೆ ನೆರವು ನೀಡುತ್ತಿದ್ದರು. ತಾಲೂಕಿನ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿಯೂ ಸೇವೆಸಲ್ಲಿಸಿ ದ್ದ ಇವರು ಮಿತ ಭಾಷಿ ಎನ್ನಿಸಿದ್ದರೂ ತಮ್ಮ ಆತ್ಮೀಯ ವಲಯದಲ್ಲಿ ತಮಾಷೆಯ ಮಾತುಗಳ ಮೂಲಕ ಗುರುತಿಸಿಕೊಂಡಿದ್ದರು.

ಚೇತಕ್ ಬೈಕ್‍ಗಳು ಪರಿಚಯಿಸಲ್ಪಟ್ಟಾಗ ಅದನ್ನು ಪಡೆದ ಅಂಕೋಲೆಯ ಮೊದಲಿಗರ ಸಾಲಿನಲ್ಲಿ ಒಬ್ಬರಾ ಗಿದ್ದರು ಎನ್ನಬಹುದು. ಕಳೆದ ಕೆಲ ವರ್ಷಗಳ ಹಿಂದೆ ಪತ್ನಿ ಸಮೇತ ಥೈಲ್ಯಾಂಡ್, ದುಬೈ, ಯೂರೋಪಿ ಯನ್ ಸೇರಿದಂತೆ ಹತ್ತಾರು ದೇಶಗಳ ಪ್ರವಾಸ ಕೈಗೊಂಡಿದ್ದರು.

ಮೃತರು, ಪತ್ನಿ ಶಾರದಾ ನಾಯಕ, ಹೆಣ್ಣುಮಕ್ಕಳಾದ ದೇವಯಾನಿ ನಾರಾಯಣ ನಾಯಕ ಹಿಚ್ಕಡ, ಸುಷ್ಮಾ ವಸಂತರಾಯ ಗಾಂವಕರ ಹಿತ್ತಲಮಕ್ಕಿ, ರೇಷ್ಮಾ ಗುರುಮೂರ್ತಿ ಏಸುಮನೆ ಲಕ್ಷ್ಮೇಶ್ವರ, ಮಗ ಗಣಪತಿ ವಿಠ್ಠಲ ನಾಯಕ (ವಲಯ ಅರಣ್ಯಾಧಿಕಾರಿ ಕಾರವಾರ) ಸೇರಿದಂತೆ ಅಪಾರ ಬಂಧುಬಳಗ ತೊರೆದಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಬಾಸಗೋಡನಲ್ಲಿ ನೇರವೇರಿಸಲಾಯಿತು.

ವಿವಿಧ ಗಣ್ಯರು, ಬಂಧುಗಳು, ಕುಟುಂಬದ ಆಪ್ತರು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಊರನಾಗರಿಕರು ಅಂತಿಮ ದರ್ಶನ ಪಡೆದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button