ಮಾಹಿತಿ
Trending

ಕೋವಿಡ್ ಬಳಿಕ ವರದಳ್ಳಿ ಶ್ರೀಧರಾಶ್ರಮದಲ್ಲಿ ದರ್ಶನ ಪುನರಾರಂಭ: ಆದರೆ ಈ ನಿಯಮ ಕಡ್ಡಾಯ

ಶ್ರೀಧರಸ್ವಾಮಿ ಭಕ್ತರಿಗೆ ದರ್ಶನಕ್ಕೆ ಅವಕಾಶ
ಆದರೆ ಈ ಕೆಳಕಂಡ ನಿಯಮ ಪಾಲಿಸಬೇಕು

ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯಾನುಸಾರವಾಗಿ ದಿನಾಂಕ 25/01/2021 ರ ಸೋಮವಾರದಿಂದ ಮಧ್ಯಾಹ್ನ 2.30 ರಿಂದ ಶ್ರೀ ಶ್ರೀಧರಾಶ್ರಮ ಶ್ರೀ ಕ್ಷೇತ್ರ ವರದಪುರದಲ್ಲಿ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳವರ ಸನ್ನಿಧಾನದ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಮಧ್ಯಾಹ್ನ 2.30 ರಿಂದ 5.00 ಗಂಟೆಯ ವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ, ಸಂಜೆ 5.00 ಗಂಟೆಯ ನಂತರ ಶ್ರೀ ಆಶ್ರಮದ ಪರಿಸರದಲ್ಲಿ ಆಶ್ರಮದ ಸಿಬ್ಬಂದಿಗಳ ಮತ್ತು ಆಶ್ರಮವಾಸಿಗಳ ವಿನಃ ಸಾರ್ವಜನಿಕರ ಉಪಸ್ಥಿತಿಯನ್ನು ನಿಷೇಧಿಸಲಾಗಿದೆ. ದಯಮಾಡಿ ಭಕ್ತಾದಿಗಳು ಸಹಕರಿಸಿ ಈ ಕೆಳಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕಾಗಿ ಕೋರುತ್ತೇವೆ.

60 ವರ್ಷದ ಮೇಲ್ಪಟ್ಟವರು ಮತ್ತು 10 ವರ್ಷದ ಒಳಗಿನವರಿಗೆ ಶ್ರೀ ಆಶ್ರಮದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶ್ರೀ ಆಶ್ರಮಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿ ವಿನಂತಿ. ಶ್ರೀ ಭಗವಾನರ ದರ್ಶನ ಮಾಡಲು ಹೋಗುವಾಗ ಶ್ರೀ ಶ್ರೀಧರ ತೀರ್ಥದಲ್ಲಿ ಕೈ ಕಾಲು ಮುಖವನ್ನು ತೊಳೆಯಲು ಮಾತ್ರ ಅವಕಾಶವಿರುತ್ತದೆ. ಸದ್ಯ ತೀರ್ಥ ಸ್ನಾನಕ್ಕೆ ಅವಕಾಶವಿರುವುದಿಲ್ಲ. ಶ್ರೀ ಭಗವಾನರ ಸನ್ನಿಧಾನ ಮಂದಿರದ ಒಳಗೆ ಪ್ರವೇಶವಿರುವುದಿಲ್ಲ. ಶ್ರೀ ಮಂದಿರದ ಹೊರಗಿನಿಂದಲೇ ಶ್ರೀ ಭಗವಾನರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಂದಿರದ ಸುತ್ತು ಪ್ರದಕ್ಷಿಣೆ, ಕುಳಿತುಕೊಳ್ಳುವುದು, ಭಜನೆ,ಸಂಗೀತ, ಜಪಾನುಷ್ಠಾನಗಳನ್ನು ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಭಕ್ತಾದಿಗಳು ದರ್ಶನವನ್ನು ಮಾಡಿಕೊಂಡು ಹೋಗತಕ್ಕದ್ದು. ಕೇಂದ್ರ ಸರ್ಕಾರದ ಆದೇಶದಂತೆ ತೀರ್ಥ ಪ್ರಸಾದ ಮಂತ್ರಾಕ್ಷತೆ ವಿನಿಯೋಗ, ಕಾಯಿ ಒಡೆಯುವುದು ಇವುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ವಸತಿ ಮುಂತಾದ ವ್ಯವಸ್ಥೆಗಳು ಇರುವುದಿಲ್ಲ.ಆಶ್ರಮದಲ್ಲಿರುವ ಕಾರ್ಯಲಯದ ಸೇವೆಗಳು ಲಭ್ಯವಿರುವುದಿಲ್ಲ. ನಿಮ್ಮ ಪಾದರಕ್ಷೆ ಮುಂತಾದ ವಸ್ತುಗಳನ್ನು ನಿಮ್ಮ ವಾಹನಗಳಲ್ಲೆ ಇಡತಕ್ಕದ್ದು, ಆಶ್ರಮದ ಆವರಣದಲ್ಲಿ ವಾಹನ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಆಶ್ರಮಕ್ಕೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು. ಆರೋಗ್ಯ ಸೇತು ಆಪ್ ಹೊಂದಿರತಕ್ಕದ್ದು. ಆಧಾರ ಕಾರ್ಡ್ ತರತಕ್ಕದ್ದು. ಸರ್ಕಾರವು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು ಶ್ರೀಧರ ಸೇವಾ ಮಹಾಮಂಡಲ ಮಾಹಿತಿ ನೀಡಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button