ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ
ಚೀಟಿ ಎತ್ತುವುದರ ಮೂಲಕ ಕೆಲವು ಮೀಸಲಾತಿ ಆಯ್ಕೆ
ಅಪಸ್ವರ, ಭಿನ್ನಾಭಿಪ್ರಾಯಗಳಿದ್ದಲ್ಲಿ ದೂರು ನೀಡಿ
ಜಿಲ್ಲಾಧಿಕಾರಿ ಹರೀಶ್ ಕುಮಾರ್ ಹೇಳಿಕೆ
ಹೊನ್ನಾವರ: ತಾಲೂಕಿನ 26 ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಇಂದು ಹೊನ್ನಾವರ ಪಟ್ಟಣದ ಹವ್ಯಕ ಸಭಾಭವನದಲ್ಲಿ ಜಿಲ್ಲಾಧಿಕಾರಿ ಹರಿಶಕುಮಾರ ನೇತ್ರತ್ವದಲ್ಲಿ ನಡೆಯಿತು, ಮಂಕಿ ಪಟ್ಟಣ ಪಂಚಾಯತಾಗಿ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಚಿತ್ತಾರ ಮತ್ತು ಅನಂತವಾಡಿ ಗ್ರಾಮ ಪಂಚಾಯತಿನ ಕೆಲವು ಭಾಗಗಳು ಮಂಕಿ ಪಟ್ಟಣ ಪಂಚಾಯತಗೆ ಸೇರ್ಪಡೆಯಾಗಿರುವುದರಿಂದ ಚಿತ್ತಾರ ಮತ್ತು ಅನಂತವಾಡಿ ಗ್ರಾಮ ಪಂಚಾಯತ ಚುನಾವಣೆ ನಡೆದಿಲ್ಲವಾದರು ಅಧ್ಯಕ್ಷ-ಉಪಾದ್ಯಕ್ಷ ಮೀಸಲಾತಿ ಪ್ರಕಟಿಸಲಾಗಿದೆ.
ಈ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯತ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ ಕೆ ಹರೀಶಕುಮಾರ ಈ ಮೀಸಲಾತಿಗಳನ್ನು ತಂತ್ರಾoಶವನ್ನು ಬಳಸುವುದರ ಮೂಲಕ ಆಯ್ಕೆ ಗೊಳಿಸಲಾಗುತ್ತದೆ. ಈ ತಂತ್ರಾoಶದ ಬಗ್ಗೆ ತಮ್ಮದೆನಾದರು ಅಪಸ್ವರ ಭಿನ್ನಾಭಿಪ್ರಾಯಗಳು ಇದ್ದರೆ ದೂರು ನೀಡಬಹುದು. ಅದನ್ನು ನಾವು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದರು,
ಗ್ರಾಮ ಪಂಚಾಯತವಾರು ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಹಿಗಿದೆ: ಹಳದೀಪುರ- ಅಧ್ಯಕ್ಷ ಸಾಮಾನ್ಯ – ಉಪಾದ್ಯಕ್ಷ ಸಾಮಾನ್ಯ ಮಹಿಳೆ, ನವಿಲಗೋಣ- ಅಧ್ಯಕ್ಷ -ಸಾಮಾನ್ಯ, ಉಪಾದ್ಯಕ್ಷ ಹಿಂದುಳಿದ ವರ್ಗ ಅ, ಕಡತೋಕಾ- ಹಿಂದುಳಿದ ವರ್ಗ ಅ ಅವರ್ಗ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಚಂದಾವರ- ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ ಸಾಮಾನ್ಯ, ಕಡ್ಲೆ- ಅಧ್ಯಕ್ಷ ಹಿಂದುಳಿದ ವರ್ಗ ಅ, – ಉಪಾದ್ಯಕ್ಷ ಸಾಮಾನ್ಯ ಮಹಿಳೆ, ಸಾಲಕೋಡ.-ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ ಸಾಮಾನ್ಯ ಕ್ಕೆ ಬಂದಿದೆ.
ಹೊಸಾಕುಳಿ- ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕರ್ಕಿ- ಅಧ್ಯಕ್ಷ ಹಿಂದುಳಿದ ವರ್ಗ ಬ ಮಹಿಳೆ – ಉಪಾದ್ಯಕ್ಷ-ಸಾಮಾನ್ಯ ಮಹಿಳೆ, ಮುಗ್ವಾ-ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ ಹಿಂದುಳಿದ ವರ್ಗ ಬ, ಎಂದು ತಿಳದುಬಂದಿದೆ. ಮಾವಿನಕುರ್ವಾ-ಅಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ ಹಿಂದುಳಿದ ವರ್ಗ, ಹಡಿನಬಾಳ-ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ – ಉಪಾದ್ಯಕ್ಷ- ಸಾಮಾನ್ಯ, ಚಿಕ್ಕನಕೋಡ-ಅಧ್ಯಕ್ಷ -ಸಾಮಾನ್ಯ-ಉಪಾದ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ ಎಂದು ಘೋಷಿಸಲಾಗಿದೆ.
ಖರ್ವಾ- ಅಧ್ಯಕ್ಷ ಸಾಮಾನ್ಯ ಮಹಿಳೆ- ಉಪಾದ್ಯಕ್ಷ- ಸಾಮಾನ್ಯ , ಜಲವಳ್ಳಿ- ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, – ಉಪಾದ್ಯಕ್ಷ-ಸಾಮಾನ್ಯ , ಹೆರೆಂಗಡಿ- ಅಧ್ಯಕ್ಷ – ಸಾಮಾನ್ಯ -ಉಪಾದ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ, ಉಪೋಣಿ- ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ ಹಿಂದುಳಿದ ಬ ವರ್ಗ ಮಹಿಳೆ, ನಗರಬಸ್ತಿಕೇರಿ- ಅಧ್ಯಕ್ಷ ಸಾಮಾನ್ಯ – ಉಪಾದ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಕುದ್ರಗಿ- ಅಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆ- ಉಪಾದ್ಯಕ್ಷ-ಸಾಮಾನ್ಯ, ಕೋಡಾಣಿ- ಅಧ್ಯಕ್ಷ – ಸಾಮಾನ್ಯ ಮಹಿಳೆ – ಉಪಾದ್ಯಕ್ಷ -ಸಾಮಾನ್ಯ, ಮಾಗೋಡ- ಅಧ್ಯಕ್ಷ ಸಾಮಾನ್ಯ, – ಉಪಾದ್ಯಕ್ಷ ಹಿಂದುಳಿದ ವರ್ಗ ಅ, ಬಳ್ಕೂರ-ಅಧ್ಯಕ್ಷ – ಸಾಮಾನ್ಯ ಮಹಿಳೆ- ಉಪಾದ್ಯಕ್ಷ-ಸಾಮಾನ್ಯ, ಮೇಲಿನಇಡಗುಂಜಿ – ಅಧ್ಯಕ್ಷ ಹಿಂದುಳಿದ ವರ್ಗ ಬ – ಉಪಾದ್ಯಕ್ಷ-ಸಾಮನ್ಯ ಮಹಿಳೆ,
ಕಾಸರಕೋಡ-ಅಧ್ಯಕ್ಷ – ಸಾಮಾನ್ಯ – ಉಪಾದ್ಯಕ್ಷ- ಸಾಮಾನ್ಯ ಮಹಿಳೆ,. ಕೇಳಗಿನೂರ ಅಧ್ಯಕ್ಷ ಸಾಮಾನ್ಯ – ಉಪಾದ್ಯಕ್ಷ- ಸಾಮಾನ್ಯ ಮಹಿಳೆ, ಅಧ್ಯಕ್ಷ, ಉಪಾಧ್ಯಕ್ಷರಾಗಲಿದ್ದಾರೆ.
ಕೇಲವು ಮೀಸಲಾತಿಗಳನ್ನು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಿದರೆ ಇನ್ನು ಉಳದವುಗಳನ್ನು ಮ್ಯಾನಲ್ ಆಪ್ ಮೂಲಕ ಮಾಡಲಾಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಭಟ್ಕಳ ಸಹಾಯಕ ಆಯುಕ್ತರಾದ ಭರತ್ ಎಸ್, ಹೊನ್ನಾವರ ತಹಶಿಲ್ದಾರ ವಿವೇಕ ಶೇಣ್ವಿ, ಇದ್ದರು,
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,