ಕುಮಟಾ: ಸುಲಭವಾಗಿ ಪರಿಹರಿಸಿಕೊಳ್ಳಬಹುದು ಎಂದು ಕರ್ಕಿ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡ ಮೂರು ದಿನಗಳ ಶಾಸ್ತ್ರೀಯ ಸಂಗೀತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ ಹಿರಿಯ ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಭಾಗ್ಯ ಅನಾಯಾಸವಾಗಿ ಒದಗಿಬಂದಿದೆ. 30 ವರ್ಷಗಳ ಹಿಂದೆ ಧಾರವಾಡದಲ್ಲಿ ಅಧ್ಯಯನ ಸಂದರ್ಭದಲ್ಲಿ ಡಾ ಗಣಪತಿ ಭಟ್ಟರು ವಿವಿಧ ಶಾಸ್ತ್ರದ ಬೋಧನೆಯೊಂದಿಗೆ ಸಮಾಜಾಭಿಮುಖಿ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟದ್ದನ್ನು ಸ್ಮರಿಸಿದರು.
ಮುಖ್ಯ ಅತಿಥಿ ಧಾರವಾಡದ ಶ್ರೀಮತಿ ಸುಧಾ ಚಿಕ್ಕಬಳ್ಳಾಪುರ ಮಾತನಾಡಿ ಕಲೆಯೊಂದಿಗೆ ಸಂಸ್ಕಾರ ಬೋಧನೆ ಹಾಗು ಗ್ರಂಥ ರಚನೆ ಮಾಡುತ್ತಿರುವ ಕಲಾಶ್ರೀ ಸಂಸ್ಥೆ ನಿಜವಾಗಿಯೂ ಅಸಾಧಾರಣವಾಗಿದೆ ಎಂದರು. ಕಲಾಶ್ರೀ ಸಾಧಕ ಪ್ರಶಸ್ತಿ ಸ್ವೀಕರಿಸಿದ ಪಂ ಕೃಷ್ಣರಾವ ಇನಾಮದಾರ ಮಾತನಾಡುತ್ತ ಈವರೆಗೆ ಅನೇಕ ಸನ್ಮಾನಗಳು ಜರುಗಿವೆ. ಆದರೆ ಗ್ರಾಮೀಣ ಪ್ರದೇಶದ ಸಂಸ್ಥೆಯೊಂದು ಇಂತಹ ಸ್ವಾಮೀಗಳ ಮುಖಾಂತರ ಕೊಡಮಾಡಿದ ಈ ಪ್ರಶಸ್ತಿ ಧನ್ಯತೆಯನ್ನು ಹೆಚ್ಚಿಸಿದ್ದಲ್ಲದೇ 84 ರ ಇಳಿವಯಸ್ಸಿನಲ್ಲೂ ಸಾಧನೆ ಮಾಡುವ ಹುಮ್ಮಸ್ಸು ತಂದುಕೊಟ್ಟದೆ ಎಂದರು.
ಕಾರ್ಯದರ್ಶಿ ಡಾ ಕೆ ಗಣಪತಿ ಪ್ರಾಸ್ತವಿಕ ನುಡಿದರು. ಅಧ್ಯಕ್ಷ ಎಚ್ ಎನ್ ಅಂಬಿಗ ಧನ್ಯವಾದ ಸಮರ್ಪಿಸಿದರು. ರೇಖಾ ಹೆಗಡೆ ಹಾಗು ಶಾಂಭವಿ ದೇಶಪಾಂಡೆ ಪ್ರಶಸ್ತಿಪತ್ರ ವಾಚಿಸಿದರು. ವಿದುಷಿ ರೋಹಿಣಿ ಭಟ್ಟ ಗುರುಗಿತೆಯನ್ನು ಪಠಿಸಿದರು.
ವಿಸ್ಮಯ ನ್ಯೂಸ್, ಕುಮಟಾ
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888