ವಕೀಲರಿಗೆ ರಕ್ಷಣೆ ನೀಡುವ ಪ್ರೊಟೇಕ್ಷನ್ ಕಾಯ್ದೆ ಜಾರಿಗೆ ತರುವಂತೆ ಆಗ್ರಹ :ಅಂಕೋಲಾ ಬಾರ್ ಅಸೋಸಿಯೇಶನಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ

ಅಂಕೋಲಾ : ದೇಶದ ಕೆಲವೆಡೆ ವಕೀಲರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ, ವಕೀಲರಿಗೆ ರಕ್ಷಣೆ ನೀಡುವ (ಪ್ರೊಟೆಕ್ಷನ್ ಕಾಯ್ದೆ) ಜಾರಿಗೆ ತರುವಂತೆ ಒತ್ತಾಯಿಸಿ ಅಂಕೋಲಾ ಬಾರ್ ಅಸೋಸಿ ಯೇಶನ್ ಪದಾಧಿಕಾರಿಗಳು ಮತ್ತು ಸದಸ್ಯರು, ತಹಸೀಲ್ದಾರ್ ಉದಯ ಕುಂಬಾರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ತಿಳಿಸಿದಂತೆ ಸಮಾಜ ಸೇವೆಯಲ್ಲಿ ವಕೀಲರ ಪಾತ್ರ ಬಹುಮುಖ್ಯವಾಗಿದ್ದು, ಇತ್ತೀಚಿನ ವಿದ್ಯಾಮಾನ ಗಮನಿಸಿದರೆ ವಕೀಲರಿಗೆ ಯಾವುದೇ ರಕ್ಷಣೆ ಇಲ್ಲದೇ ನ್ಯಾಯಾಲಯದ ಆವರಣದಲ್ಲಿಯೇ ಯಾರೋ ಬೇಕಾದರೂ ಬಂದು ಹಲ್ಲೆ ಮಾಡಿ ಕೊಲ್ಲುವಂತಹ ಧಾರುಣ ಸ್ಥತಿ ಬಂದೊದಗಿದೆ. ಆದ್ದರಿಂದ ವಕೀಲರ ರಕ್ಷಣೆ ಮತ್ತು ಅವರನ್ನೇ ನಂಬಿದ ಕುಟುಂಬದ ಭದ್ರತೆ ದೃಷ್ಟಿಯಿಂದ ವಕೀಲರಿಗೆ ರಕ್ಷಣೆ ನೀಡುವ ಪ್ರೋಟೆಕ್ಷನ್ ಆಕ್ಟ್ ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.

ಇತ್ತೀಚೆಗೆ ತೆಲಂಗಾಣದಲ್ಲಿ ವಕೀಲ ದಂಪತಿಗಳ ಮೇಲೆ ಹಲ್ಲೆ ಮಾಡಿ ಕೊಲೆಗೈದ ಪ್ರಕರಣ, ಹೊಸ ಪೇಟೆ ಯ ಕೋರ್ಟ್ ಆವರಣದಲ್ಲಿ ಫೆ.27 ರಂದು ಆವಾರಣದಲ್ಲಿ ಹಿರಿಯ ನೋಟರಿ ವಕೀಲರನ್ನು ಅಟ್ಟಾಡಿಸಿ ಹಾಡು ಹಗಲೇ ಕೊಲೆಗೈದ ದುಷ್ಕರ್ಮಿಗಳನ್ನು ಸೆರೆ ಹಿಡಿದು ಶಿಕ್ಷಗೆ ಒಳಪಡಿಸುವಂತೆ ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಸುರೇಶ ಬಾನವಳಿಕರ ಮನವಿ ಓದಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿನೋದ ಶಾನಭಾಗ, ಕಾರ್ಯದರ್ಶಿ ಬಿ.ಟಿ.ನಾಯಕ, ವಕೀಲರಾದ ಆರ್.ಟಿ.ಗೌಡ, ಸಂಪದಾ ಗುನಗಾ, ಎಂ.ಪಿ.ಭಟ್, ನಾರಾಯಣ ನಾಯಕ, ಜಿ.ಎನ್.ನಾಯ್ಕ, ಜಿ.ವಿ.ನಾಯ್ಕ, ಮಮತಾ ಕೆರಮನೆ, ರಾಜು ಹರಿಕಂತ್ರ, ವಿನಾಯಕ ನಾಯ್ಕ, ಉಮೇಶ ನಾಯ್ಕ, ಎನ್.ಎಸ್.ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿ ದ್ದರು.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version