ಸ್ವಂತ ಮಕ್ಕಳೇ ಹೆತ್ತವರನ್ನು ನೋಡಿಕೊಳ್ಳದೇ ಮನೆಯಿಂದ ಹೊರಹಾಕುವುದನ್ನ ನೋಡಿದ್ದೇವೆ. ಕೇಳಿದ್ದೇವೆ. ಪದೇ ಪದೇ ಇಂಥ ಘಟನೆಗಳು ವರದಿಯಾಗುತ್ತಲೇ ಇದೆ. ಆದರೆ, ಈ ವಿದ್ಯಾರ್ಥಿ ಮಾತ್ರ ತಮಗೆ ಶಿಕ್ಷಣ ಹೇಳಿಕೊಟ್ಟ ಶಿಕ್ಷಕಿಗೆ ಕೃತಜ್ಞತೆ ಸಲ್ಲಿಸಿದ ಪರಿಯನ್ನು ಮೆಚ್ಚಲೇ ಬೇಕು.
ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನ. ಶಾಲೆ ಎಂಬ ವಿದ್ಯಾದೇಗುಲದಲ್ಲಿ ಕೆಲಸ ಮಾಡುತ್ತಾ, ವಿದ್ಯೆ ಕಲಿಸುವ ಶಿಕ್ಷಕ ವಿದ್ಯಾರ್ಥಿಗಳ ಪಾಲಿಗೆ ಕಣ್ಣಿಗೆ ಕಾಣುವ ದೇವರು. ಹೀಗಾಗಿ ಯಾರು ಗುರುವನ್ನು ಗೌರವಿಸುತ್ತಾರೋ, ಅವರು ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರಂತೆ. ತಮಗೆ ವಿದ್ಯೆ ಕಲಿಸಿದ ಗುರುವನ್ನು ನೆನಪಿಸಿಕೊಂಡು, ಅವರಿಗೆ ಕೃತಜ್ಞತೆ ಸಲ್ಲಿಸುವವ ವಿದ್ಯಾರ್ಥಿಗಳು ತುಂಬಾ ಜನರಿದ್ದಾರೆ. ಈ ಘಟನೆಯನ್ನು ನೋಡಿದರೆ ಗುರುವಿನ ಹೃದಯ ತುಂಬಿ ಬರದೆ ಇರಲಾರದು. ಹೌದು, ಈ ಕಾಲದಲ್ಲಿ ಸ್ವಂತ ಮಕ್ಕಳೇ ಹೆತ್ತವರನ್ನು ನೋಡಿಕೊಳ್ಳದೇ ಮನೆಯಿಂದ ಹೊರಹಾಕುವುದನ್ನ ನೋಡಿದ್ದೇವೆ. ಕೇಳಿದ್ದೇವೆ. ಪದೇ ಪದೇ ಇಂಥ ಘಟನೆಗಳು ವರದಿಯಾಗುತ್ತಲೇ ಇದೆ. ಆದರೆ, ಈ ವಿದ್ಯಾರ್ಥಿ ಮಾತ್ರ ತಮಗೆ ಶಿಕ್ಷಣ ಹೇಳಿಕೊಟ್ಟ ಶಿಕ್ಷಕಿಗೆ ಕೃತಜ್ಞತೆ ಸಲ್ಲಿಸಿದ ಪರಿಯನ್ನು ಮೆಚ್ಚಲೇ ಬೇಕು.
ಕೇರಳದ ಮಲ್ಲಂಪುರದಲ್ಲಿ ತಮಗೆ ಗಣಿತ ಪಾಠ ಮಾಡುತ್ತಿದ್ದ ಶಿಕ್ಷಕಿ ಭಿಕ್ಷೆ ಬೇಡುತ್ತಿರುವುದನ್ನು ನೋಡಿದ, ಈ ವಿದ್ಯಾರ್ಥಿ ಅಕ್ಷರಶ: ದಂಗಾಗಿದ್ದಾರೆ. ಭಿಕ್ಷೆ ಬೇಡಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಏಕೆ ಬಂತು ಅಂತಾ ಯೋಚಿಸುತ್ತಲೇ, ಶಿಕ್ಷಕಿ ಬಳಿ ತೆರಳಿದ್ದಾಳೆ. ಆದರೆ, ಅದೆಷ್ಟೊ ಜನರಿಗೆ ಪಾಠ ಮಾಡಿದ ಆ ಶಿಕ್ಷಕಿಗೆ ಈ ವಿದ್ಯಾರ್ಥಿನಿಯ ಗುರುತು ಹಿಡಿಯಲಾಗಲಿಲ್ಲ.
ಕೊನೆಗೆ ಆ ವಿದ್ಯಾರ್ಥಿನಿ ಶಿಕ್ಷಕಿಯನ್ನು ಅಲ್ಲಿಯೇ ಬೇರೆಕಡೆ ಕರೆದುಕೊಂಡು ಹೋಗಿ, ಇಂಥ ಪರಿಸ್ಥಿತಿ ಬರಲು ಕಾರಣ ಏನು? ಏನಾಯ್ತು ಅಂತಾ ವಿಚಾರಿಸಿದ್ದಾಳೆ. ತನ್ನ ನೆಚ್ಚಿನ ಟೀಚರ್ ಹೇಳಿದನ್ನು ಕೇಳಿ ವಿದ್ಯಾರ್ಥಿನಿಗೆ ದುಖ: ತಡೆಯಲು ಆಗಲಿಲ್ಲ. ಹೌದು, ಕಷ್ಟ ಪಟ್ಟು ಓದಿಸಿ, ಬೆಳೆಸಿದ ಹೆತ್ತ ಮಕ್ಕಳೇ ಈಕೆಗೆ ಮೋಸ ಮಾಡಿದ್ದಾರೆ. ಇದ್ದಬದ್ದ ಹಣವನ್ನು ತೆಗೆದುಕೊಂಡು ಓಡಿಹೋಗಿದ್ದಾರಂತೆ. ಈಗ ಎಲ್ಲಿದ್ದಾರೋ ತಿಳಿದಿಲ್ಲ. ಹೀಗಾಗಿ ನಾನು ಅನಿವಾರ್ಯವಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದು ಎಂದು ಶಿಕ್ಷಕಿ ಆ ವಿದ್ಯಾರ್ಥಿನಿಗೆ ಹೇಳಿಕೊಂಡಿದ್ದಾರೆ.
ಹೇಗಾದರೂ ಮಾಡಿ, ತಮಗೆಲ್ಲ ಪಾಠ ಮಾಡಿದ ಶಿಕ್ಷಕಿಗೆ ಸಹಾಯ ಮಾಡಬೇಕೆಂದು ಯೋಚಿಸಿದ ವಿದ್ಯಾರ್ಥಿನಿ, ಶಿಕ್ಷಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಹಸಿದುಕೊಂಡಿದ್ದ ಶಿಕ್ಷಕಿಗೆ ಹೊಟ್ಟೆ ತುಂಬಾ ಊಟಹಾಕಿದ್ದಾಳೆ. ಅಷ್ಟೆ ಅಲ್ಲ, ತನ್ನ ಜೊತೆ ಓದಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಮಾಹಿತಿ ರವಾನಿಸಿ, ಶಿಕ್ಷಕಿಯ ಜೀವನಕ್ಕೆ ನೆರವಾಗಿ, ಶಾಶ್ವರ ಆಶ್ರಯ ಕಲ್ಪಿಸಿದ್ದಾಳೆ. ನಿಜವಾಗಿಯೂ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಸಲಾಂ!
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888