Follow Us On

WhatsApp Group
ಮಾಹಿತಿ
Trending

ಬಹುದಿನಗಳ ಬಳಿಕ ಅಂಕೋಲಾದಲ್ಲಿಂದು ಶೂನ್ಯ ಪಾಸಿಟಿವ್ ಪ್ರಕರಣ| ಕೆ ಎಲ್ ಇ ಮತ್ತು ಜಿ ಸಿ ಕಾಲೇಜಿನಲ್ಲಿ ಲಸಿಕಾ ಅಭಿಯಾನ | ಬುಧವಾರ ತಾಲೂಕಿನಲ್ಲಿ ವ್ಯಾಕ್ಸಿನೇಶನ್ ಇಲ್ಲ?

ಅಂಕೋಲಾ ಜೂ 29: ಕೊವಿಡ್ 2ನೇ ಅಲೆ ಆರಂಭವಾದಾಗಿನಿಂದಲೂ ತಾಲೂಕಿನಲ್ಲಿ ಪ್ರತಿನಿತ್ಯ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದವು. ದಿನವೊಂದರಲ್ಲೇ 147 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿ ಆತಂಕವೂ ಮಾಡುವಂತಾಗಿತ್ತು.

ಈ ನಡುವೆ ಕೊವಿಡ್ ಪಾಸಿಟಿವ್ ಕೇಸಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಬಹು ದಿನಗಳ ಬಳಿಕ ಇಂದು ಯಾವುದೇ ಹೊಸ ಪಾಸಿಟಿವ್ ಕೇಸಗಳಿಲ್ಲದೇ ಶೂನ್ಯ ಪ್ರಕರಣದ ಮೂಲಕ ಬಹುತೇಕ ಜನತೆ ಕೊಂಚ ನೆಮ್ಮದಿ ಪಡುವಂತಾದರೆ, ಕರೊನಾ ವಾರಿಯರ್ಸಗಳಿಗೆ ಸ್ವಲ್ಪ ರಿಲೀಫ್ ದೊರೆತಂತಾಗಿದೆ.

ಈ ಹಿಂದಿನ ದಿನಗಳ ಒಟ್ಟು 31ಪ್ರಕರಣಗಳು ಸಕ್ರಿಯವಾಗಿದ್ದು, ಸೋಂಕು ಮುಕ್ತರಾದ 16 ಜನರನ್ನು ಬಿಡುಗಡೆ ಗೊಳಿಸಲಾಗಿದೆ. ಒಟ್ಟು 7ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೋಲೇಶನ್ ನಲ್ಲಿ 24 ಜನರಿದ್ದಾರೆ. ಕರೊನಾದಿಂದಾಗಿ ಈ ವರೆಗೆ ತಾಲೂಕಿನಲ್ಲಿ ಒಟ್ಟೂ 58 ಸಾವಿನ ಪ್ರಕರಣಗಳು ದಾಖಲಾಗಿವೆ.

ಇಂದು ಕೆ ಎಲ್ ಇ ಕಾಲೇಜಿನಲ್ಲಿ 110, ಜಿಸಿ ಕಾಲೇಜಿನಲ್ಲಿ 322 ಸೇರಿ ಒಟ್ಟು 432 ವಿದ್ಯಾರ್ಥಿಗಳು ಮತ್ತಿತರರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು ಇದರಲ್ಲಿ ಪ್ರಥಮ ಡೋಸ್ 425 ಮತ್ತು ದ್ವಿತೀಯ ಡೋಸ್ 7 ಒಳಗೊಂಡಿದೆ.
ಕಳೆದ ಶನಿವಾರ ಲಸಿಕೆ ಕೊರತೆ ಮತ್ತಿತರ ಕಾರಣಗಳಿಂದ ಒಂದು ದಿನದ ಮಟ್ಟಿಗೆ ವ್ಯಾಕ್ಸಿನೇಶನ್ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು.

ನಾಳೆ ಜೂ 30 ರಂದು ಮತ್ತೆ ಅನಿವಾರ್ಯ ಕಾರಣದಿಂದ ವ್ಯಾಕ್ಸಿನೇಶನ್ ಪ್ರಕ್ರಿಯೆ ನಡೆಸಲಾಗುತ್ತಿಲ್ಲಾ ಎಂದು ತಾಲೂಕಾ ಆರೋಗ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಪದೇ ಪದೇ ವ್ಯಾಕ್ಸಿನೇಶನ್ ಕೊರತೆ ಆಗದಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಜನತೆಯ ಆರೋಗ್ಯ ಕಾಳಜಿಗೆ ಒತ್ತು ನೀಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button