Uttara Kannada
Trending

ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಇಬ್ಬಗೆ ನೀತಿ?

ಭಟ್ಕಳ; ಕರೋನಾ ಪ್ರಕರಣಗಳಿಂದಾಗಿ ದೇಶದಲ್ಲಿ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಭಟ್ಕಳ ಪಟ್ಟಣ ವೀಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತ ಹೆಜ್ಜೆ ಇಡುತ್ತಿದೆ ಆದರೆ ಈ ಸಂದರ್ಭದಲ್ಲಿ ಸರಕಾರ ಪಟ್ಟಣವನ್ನು ಕಪ್ಪು ಚುಕ್ಕೆಯನ್ನಾಗಿ ಗುರುತಿಸಲು ಪ್ರಯತ್ನಿಸುತ್ತಿದೆ ಎಂದು ಇದೀಗ ಭಟ್ಕಳ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ
ಈ ನಡುವೆ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿದಿನ ಹೊರಡಿಸುವ ಹೆಲ್ತ್ ಬುಲೆಟಿನ್ ಭಟ್ಕಳದಿಂದ ಪತ್ತೆಯಾದ ಸುಮಾರು 37 ಸೋಂಕಿತರ ವಾಸ ಸ್ಥಳವನ್ನು ಭಟ್ಕಳವೆಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ .ಆದರೆ ಈಗ ಜಿಲ್ಲೆಯ ಸಿದ್ದಾಪುರ,ಅಂಕೋಲ,ಹಳಿಯಾಳ ಹೊರತುಪಡಿಸಿ 9 ತಾಲ್ಲೂಕುಗಳಲ್ಲೂ ಸೋಂಕಿತರು ಪತ್ತೆಯಾಗಿದ್ದಾರೆ ಈ ಪೈಕಿ ಕುಮಟಾ ಸೋಂಕಿತನನ್ನು ಹೊರತುಪಡಿಸಿದರೆ ಉಳಿದೆಲ್ಲ ಸೋಂಕಿತರ ವಾಸಸ್ಥಳವನ್ನು ಹೆಲ್ತ್ ಬುಲೆಟಿನನಲ್ಲಿ ಉತ್ತರ ಕನ್ನಡವೆಂದೆ ಉಲ್ಲೇಖಿಸಲಾಗಿದೆ ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿ ಉದ್ದೇಶ ಪೂರ್ವಕವಾಗಿ ಭಟ್ಕಳದ ಹೆಸರು ಕೆಡಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ ಭಟ್ಕಳಿಗರ ಗೊಂದು ಇತರರಿಗೊಂದು ಇಬ್ಬಗೆಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ದೇಶದ ವಿವಿಧೆಡೆ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ ಪಟ್ಟಣ ಮೂಲದ ಕೆಲವು ಯುವಕರು ಶಾಮೀಲಾದ ಕಾರಣ ಜಗತ್ತಿನ ನಕಾಶೆಯಲ್ಲಿ ಕಪ್ಪು ಚುಕ್ಕೆಯಾಗಿ ಗುರುತಿಸಿಕೊಂಡು ಭಟ್ಕಳ ಬೀಗ ಮತ್ತೆ ಕರಣದಿಂದಾಗಿ ಕಳಂಕಕ್ಕೆ ತುತ್ತಾಗುವಂತಾಗಿದೆ ಜಗತ್ತಿನೆಲ್ಲೆಡೆ ಕರೋನ ಮಹಾಮಾರಿ ತಾಂಡವಾಡುತ್ತಿದ್ದರೂ ಭಟ್ಕಳವನ್ನು ಹಾಗೂ ಭಟ್ಕಳ ಗರನ್ನು ಬೇರೆಯದೇ ರೀತಿಯಲ್ಲಿ ಪ್ರತ್ಯೇಕ ಭಾವನೆಯಿಂದ ನೋಡಲಾಗುತ್ತಿದೆ ಎಂದು ಭಟ್ಕಳಿಗರ ಬೇಸರ ವ್ಯಕ್ತಪಡಿಸಿದ್ದಾರೆ ಪರಿಮಳದ ಮಲ್ಲಿಗೆ ರುಚಿಕರ ಬಿರಿಯಾನಿ ಯಿಂದಾಗಿ ಎಲ್ಲೆಡೆ ಹೆಸರು ಮಾಡಿರುವ ಈ ಪಟ್ಟಣ ವೀಗ ಕೆಲವು ಕಳಂಕಕ್ಕೆ ಇತ್ತೀಚಿಗೆ ತುತ್ತಾಗುತ್ತಿರುವುದು ವಿಪರ್ಯಾಸವೇ ಸರಿ.
ಈ ಬಗ್ಗೆ ಅಸಮಾಧಾನ ವ್ಯಕಪಡಿಸಿದ ತಂಜಿಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಕಾಯಿಲೆ ದೇವರು ಕೊಡುವುದು ಎಲ್ಲರಿಗೂ ಬರುತ್ತದೆ. ಆದರೆ ಸರ್ಕಾರ ಮತ್ತು ಜಿಲ್ಲಾಡಳಿತ ಭಟ್ಕಳದ ಹೆಸರನ್ನು ಮಾತ್ರ ಉಲ್ಲೇಖಿಸುವುದು ಸರಿಯಲ್ಲ .ಈಗ ಜಿಲ್ಲೆಯ ಹಲವು ತಾಲೂಕಿನಲ್ಲಿ ಕರೋನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಅವರ ಊರು ಕೂಡ ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಿ. ಇಲ್ಲವಾದರೆ ಭಟ್ಕಳ ತಾಲ್ಲೂಕಿನಲ್ಲಿ ಸೋಂಕು ಪತ್ತೆಯಾದರೆ ಉತ್ತರ ಕನ್ನಡವೆಂದು ಉಲ್ಲೇಖಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಬಿಜಿಪಿ ಜಿಲ್ಲಾಕಾರ್ಯದರ್ಶಿ ಶಿವಾನಿ ಶಾಂತರಾಮ್ ಮಾತನಾಡಿ ಮೊದಲು ಭಟ್ಕಳದಲ್ಲಿ ಕರೋನಾ ಪತ್ತೆಯಾದಾಗ ಹೆಲ್ತ್ ಬುಲೆಟಿನ್ ನಲ್ಲಿ ಭಟ್ಕಳದ ಹೆಸರು ಬರುತ್ತಿದ್ದ ನಂತರ ಬೇರೆ ತಾಲೂಕಿನಲ್ಲಿ ಕರೋನಾ ಸೋಂಕಿತರು ಪೆತ್ತೆಯಾದಗ ಉತ್ತರ ಕನ್ನಡ ಎಂದು ಬರುತ್ತಿದ್ದೆ. ಮೊದಲೇ ಭಟ್ಕಳದವರು ಎಲ್ಲಾ ರೀತಿಯಲ್ಲೂ ಬೇಸತ್ತಿದ್ದು. ಈ ಪ್ರದೇಶ ಯಾವುದಾದರೊಂದು ವಿಷಯದಲ್ಲಿ ಪ್ರಚಾರದಲ್ಲಿ ಇರುತ್ತಿದ್ದು ಕರೋನಾ ವಿಚಾರದಲ್ಲೂ ಭಟ್ಕಳದ ಜನತೆಗೆ ಬಹಳ ತೊಂದರೆ ಯಾಗಿದೆ .ಯಾವುದೇ ಕೆಲಸಕ್ಕೆ ನಮ್ಮ ಪಕ್ಕದ ತಾಲೂಕು ಅಥವಾ ಜಿಲ್ಲೆಗೆ ಹೋಗ ಬೇಕಾದರೆ ನಮ್ಮನ್ನು ಭಟ್ಕಳದವರೆಂದು ಟಾರ್ಗೇಟ್ ಮಾಡುತ್ತಾರೆ. ಯಾಕೆ ನಮ್ಮ ಭಟ್ಕಳಕ್ಕೆ ಕಳಂಕ ತರಲು ನೋಡುತ್ತಿರ .ಭಟ್ಕಳದಲ್ಲೂ ಒಳ್ಳೆಯ ವಿಚಾರಗಳಿವೆ ಇಲ್ಲಿ ಎಲ್ಲರೂ ಚನ್ನಾಗಿದ್ದೇವೆ. ಈ ಹಿಂದಿನ ಕಹಿ ಘಟನೆಯನ್ನು ಮುಂದಿಟ್ಟುಕೊಂಡು ಭಟ್ಕಳದ ಹೆಸರನ್ನು ಹಾಳು ಮಾಡಲು ಹೋಗಬೇಡಿ. ಹೆಲ್ತ್ ಬುಲೆಟಿನ್ ಆಗಲಿ ಯಾವುದೇ ವಿಚಾರದಲ್ಲಾಗಲಿ ಜಿಲ್ಲೆಯನ್ನು ಮುಂದಿಟ್ಟುಕೊಳ್ಳಿ ಎಂದು ಹೇಳಿದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button