Uttara Kannada
Trending

ಯಕ್ಷಗಾನದ ಮೇರುಕಲಾವಿದನ ಸ್ಥಿತಿ ಹೇಗಾಗಿದೆ ನೋಡಿ

ಹೊನ್ನಾವರ: ಎಲ್ಲ ಪಾತ್ರಕ್ಕೂ ಸೈ ಎನಿಸಿಕೊಂಡ ವೀರಳಾತೀವಿರಳ ಯಕ್ಷಗಾನ ಕಲಾವಿದರಲ್ಲಿ ಹಡಿನಬಾಳ ಶ್ರೀಪಾದ ಹೆಗಡೆಯವರು ಪ್ರಮುಖರು. ಭಿನ್ನವಿಭಿನ್ನ ಪಾತ್ರಗಳನ್ನು ಮಾಡಿ ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಖ್ಯಾತ ಈ ಕಲಾವಿದನ ಕುಟುಂಬ ಈಗ ಸಂಕಷ್ಟದಲ್ಲಿದೆ. ಅಪಘಾತದಿಂದ ಇನ್ನೂ ಚೇತರಿಸಿಕೊಳ್ಳದ ಹಡಿಬಾಳ ಶ್ರೀಪಾದ ಹೆಗಡೆಯವರು, ಮಾತನಾಡದ ಸ್ಥಿತಿಗೆ ತಲುಪಿದ್ದಾರೆ. ಖ್ಯಾತ ಕಲಾವಿದನ ಇಂದಿನ ಸ್ಥಿತಿ ನೋಡಿದ್ರೆ ಕಣ್ಣಲ್ಲಿ ನೀರುಬರದೆ ಇರದು. ವಿಭಿನ್ನತೆಯಿಂದ ತನ್ನೆಡೆಗೆ ಸೆಳೆದುಕೊಳ್ಳುವ ಆಯಸ್ಕಾಂತೀಯ ಗುಣವುಳ್ಳ ಕಲೆ ಯಕ್ಷಗಾನ. ಇಲ್ಲಿ ಪ್ರಬುದ್ಧ ಎಂದು ಕರೆಯಬಹುದಾದ ಕಲಾವಿದರ ಸಂಖ್ಯೆ ಬಹಳಷ್ಟಿಲ್ಲ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವವರಂತೂ ಅಪರೂಪ. ಎಲ್ಲ ಪಾತ್ರಕ್ಕೂ ಸೈ ಎನಿಸಿಕೊಂಡವರು ವೀರಳಾತೀವಿರಳ.. ಹೀಗಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಲಾವಿದರು ಹೆಚ್ಚು ಇಷ್ಟವಾಗುತ್ತಾರೆ. ಅಂಥವರ ಸಾಲಿಗೆ ಸೇರಿದವರು ಹಡಿನಬಾಳು ಶ್ರೀಪಾದ ಹೆಗಡೆ..
ಯಕ್ಷಗಾನದ ಮೇರು ಕಲಾವಿದರ ಸಾಲಿನಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾದ ಹಡಿಬಾಳ ಶ್ರೀಪಾದ ಹೆಗಡೆಯವರ ಪರಿಸ್ಥಿತಿ ಈಗ ಹೇಗಿದೆ ನೋಡಿ.. ವಿಭಿನ್ನ ಪಾತ್ರದ ಮೂಲಕ ಜನಮನ ಗೆದ್ದಿದ್ದ ಅವರೀಗ, ಹಾಸಿಗೆ ಹಿಡಿದಿದ್ದಾರೆ. ಮಾತನಾಡಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಅವರ ಈ ಪರಿಸ್ಥಿತಿ ನೋಡಿದ್ರೆ ಕಣ್ಣಲ್ಲಿ ನೀರು ಬರದೆ ಇರದು..
ಇದಕ್ಕೆಲ್ಲಾ ಕಾರಣ ಒಂದು ರಸ್ತೆ ಅಪಘಾತ.. ಹೊನ್ನಾವರದ ಕಡತೋಕಾ ಕ್ರಾಸ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡಿ ಈ ಪರಿಸ್ಥಿತಿಗೆ ಬಂದಿದ್ದಾರೆ. ಮೊದಲೇ ಬಡತನ, ಜೊತೆಗೆ ಆಸ್ಪತ್ರೆಯ ಖರ್ಚು ಬೇರೆ.. ಹೇಗೋ ಹಣಹೊಂದಿಸಿ ಎರಡೇರಡು ಆಪರೇಷನ್ ಆಯ್ತು.. ಆದ್ರೆ, ಶ್ರೀಪಾದ ಹೆಗಡೆಯವರ ಆರೋಗ್ಯ ಮಾತ್ರ ಮೊದಲಿನಂತೆ ಆಗಲೇ ಇಲ್ಲ… ಮಾತನಾಡಲು ಕಷ್ಟದ ಪರಿಸ್ಥಿತಿ ಅವರದ್ದು..
ಶ್ರೀಪಾದ ಹೆಗಡೆಯವರ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು..ಈಗ ಅವರಿಗೆ ಆಟ ಕುಣಿಯಲು ಆಗುವುದಿಲ್ಲ.. ತೋಟದ ಉತ್ಪನ್ನ ಜೀವನಕ್ಕೆ ಸಾಲುವುದಿಲ್ಲ, ಹೀಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಶ್ರೀಪಾದ ಹೆಗಡೆಯವರು ಮೊದಲಿನ ಸ್ಥಿತಿಗೆ ಬರುವ ಸಾಧ್ಯತೆ ತೀರ ಕಡಿಮೆ. ಹೀಗಾಗಿ ಇಡೀ ಕುಟುಂಬ ಸಂಕಷ್ಟದಲ್ಲಿದೆ. ಶ್ರೀಪಾದ ಹೆಗಡೆಯವರು ಯಕ್ಷಗಾನವಿಲ್ಲದ ಮಳೆಗಾಲದಲ್ಲಿ ಗಣೇಶನ ಮೂರ್ತಿ ತಯಾರಿಸುತ್ತಿದ್ದರು. ಈಗ ಗಣಪತಿ ಮೂರ್ತಿ ತಯಾರಿಸಲು ಆಗದ ಪರಿಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿವಿಯೋಂದಿಗೆ ಮಾತನಾಡಿದ ಶ್ರೀಪಾದ ಹೆಗಡೆಯವರ ಹಿರಿಯಮಗ ಶ್ರೀಶ ಮಾತನಾಡಿ ನಾನು ಮತ್ತು ತಂದೆಯವರು ಗಣಪತಿ ತಯಾರಿಸುವ ಸಂದರ್ಬದಲ್ಲಿ ಗೋರೆ ಮತ್ತು ದೀವಗಿಗೆ ಹೋಗಿ ಮಂತ್ರಾಕ್ಷತೆ ತರುವುದು ಪದ್ಧತಿ.. ಅದರಂತೆ ಸುಮಾರು ಒಂದು ವರ್ಷದ ಹಿಂದೆ ಕಡತೋಕಾ ಕ್ರಾಸ್ ಹತ್ತಿರ ರಿಕ್ಷಾ ಡಿಕ್ಕಿ ಹೋಡಿದ ಪರಿಣಾಮ ತಂದೆಯವರು ಗಂಭೀರವಾಗಿ ಗಾಯಗೊಂಡಿದ್ದರು. ಸುಮಾರು ಏಳೆಂಟು ಲಕ್ಷ ಖರ್ಚಾಗಿತ್ತು. ಈ ವೇಳೆ ವಿವಿಧ ಸಂಘ ಸಂಸ್ಥೆಗಳು, ಯಕ್ಷಗಾನ ಕಲಾಭಿಮಾನಿಗಳು ಅವರನ್ನು ಪ್ರೀತಿವವರ ತುಂಬಾ ಜನರು ಸಹಾಯ-ಸಹಕಾರ ನೀಡಿದ್ದಾರೆ. ಅವಿಗೆಲ್ಲರಿಗು ದನ್ಯವಾದಗಳು. ಅವರೆಲ್ಲರ ಸಹಾಯ ಸಹಕಾರದಿಂದ ತಂದೆಯವರು ಚೇತರಿಸಿಕೋಳ್ಳುತ್ತಿದ್ದಾರೆ ಎಂದರು..
ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸಿದ ಇವರು ಗುಂಡಬಾಳ, ಇಡಗುಂಜಿ, ಪಂಚಲಿಂಗ, ಪೆರ್ಡೂರು, ಸಾಲಿಗ್ರಾಮ ಮೇಳ ಸೇರಿದಂತೆ ಹತ್ತಾರು ಮೇಳದಲ್ಲಿ ತಿರುಗಾಟ ಮಾಡಿದ್ದಾರೆ. ತಮ್ಮದೇ ಆದ ಅಭಿಮಾನಿಗಳನ್ನು ಇವರು ಹೊಂದಿದ್ದಾರೆ. ಆದರೆ ಶ್ರೀಪಾದ ಹೆಗಡೆಯವ ಈಗಿನ ಪರಿಸ್ಥಿತಿಯೇ ಬೇರೆ.. ಅವರು ಆದಷ್ಟು ಬೇಗ ಗುಣಮುಖರಾಗಿ ಯಕ್ಷಾಗಾನ ಕುಣಿಯುವಂತಾಗಲು ಎಂದು ಪ್ರಾರ್ಥಿಸೋಣ…

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button