Follow Us On

WhatsApp Group
ಮಾಹಿತಿ
Trending

ಮೋದಿ ಅವರಿಗೆ ಧನ್ಯವಾದ ತಿಳಿಸುವ ಪೋಸ್ಟ್ ಕಾರ್ಡ್ ಅಭಿಯಾನ: ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಸಿದ್ದಾಪುರ: ಸೇವೆ ಮತ್ತು ಸಂಘಟನೆ ಅಭಿಯಾನದ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪದಾಧಿಕಾರಿಗಳು ಪಟ್ಟಣದ ವಿವಿಧೆಡೆ ಸಂಚರಿಸಿ ಪೋಸ್ಟ್ ಕಾರ್ಡ ಅಭಿಯಾನವನ್ನು ನಡೆಸಿದರು. ಜನಪ್ರತಿನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು 20 ವರ್ಷ ಪೂರೈಸಿದ ಹಿನ್ನಲೆಯಲ್ಲಿ ದೇಶಾದ್ಯಂತ 5 ಕೋಟಿ  ಪೋಸ್ಟ್ ಕಾರ್ಡ್ ಮೂಲಕ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವ ಭಾಗವಾಗಿ ಪಟ್ಟಣದ ವಿವಿಧ ಕಡೆಗಳಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಪಲಾನುಭವಿಗಳಿಂದ ಮೋದಿ ಅವರಿಗೆ ಧನ್ಯವಾದ ತಿಳಿಸುವ ಪೋಸ್ಟ್ ಕಾರ್ಡ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ನಿರ್ಮಲಾ ಶೆಟ್ಟಿ, ಶರ್ಮಿಳಾ ಮಾದನಗೇರಿ, ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷೆ ಸುಮನಾ ಎಸ್. ಕಾಮತ್, ಪ್ರಧಾನ ಕಾರ್ಯದರ್ಶಿಯಾದ ರಾಧಿಕಾ ಕಾನಗೋಡ ಹಾಗೂ ಫಾತಿಮಾ ಆರ್.ಸಾಬ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ .ಎಸ್.ನಾಯ್ಕ, ಜಿಲ್ಲಾ ಕಮಿಟಿ ಸದಸ್ಯೆ ಕವಿತಾ ಹೆಗಡೆ, ಉಪಾಧ್ಯಕ್ಷೆ ಭವಾನಿ ಅಂಬಿಗ, ಕಾರ್ಯದರ್ಶಿ ಯಶೋಧಾ ಮಡಿವಾಳ, ಶೋಭಾ ಮೂರ್ತಿ ಆಚಾರಿ ಉಪಸ್ಥಿತರಿದ್ದರು.

Back to top button