ಹೊನ್ನಾವರ ಪಿ. ಎಲ್. ಡಿ. ಬ್ಯಾಂಕಿನಲ್ಲಿ ಸೇವಾ ನಿವೃತ್ತಿ ಹೊಂದಿದ ಲಕ್ಷ್ಮೀ ನಾರಾಯಣ ಎಸ್. ಸಾಳೇಹಿತ್ತಲ ರವರಿಗೆ ಬೀಳ್ಕೊಡುಗೆ.
ಹೊನ್ನಾವರ: 29 ವರ್ಷಗಳ ಕಾಲ ಹೊನ್ನಾವರ ಪಿ.ಎಲ್.ಡಿ. ಬ್ಯಾಂಕಿನಲ್ಲಿ ಗುಮಾಸ್ಥ, ಮೇಲ್ವಿಚಾರಕ, ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ರೀ ಲಕ್ಷ್ಮೀ ನಾರಾಯಣ (ಲಕ್ಕಿ) ಶೇಷಗಿರಿ ಸಾಲೇಹಿತ್ತಲ, ಗುಣಗುಣಿಕೇರಿ, ಹೊನ್ನಾವರ ಇವರಿಗೆ ಬ್ಯಾಂಕಿನ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿಗಳು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಿ. ಎನ್. ಭಟ್ಟ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತಿ ಹೊಂದಿದ ಲಕ್ಕಿಯವರ ಕಾರ್ಯವೈಕರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನೀವೃತ್ತಿ ಜೀವನಕ್ಕೆ ಶುಭ ಕೋರಿದರು,
ಉಪಾಧ್ಯಕ್ಷರಾದ ಶ್ರೀ ರಾಘವೇಂದ್ರ ನಾಯ್ಕ, ನಿರ್ದೇಶಕರಾದ ಶ್ರೀ ಗಣಪಯ್ಯ ಎಂ. ಗೌಡ, ಯೋಗೇಶ ಅರ್. ರಾಯ್ಕರ್, ಕೃಷ್ಣ ಜೆ. ಗೌಡ, ಗೋವಿಂದ ಎಸ್. ನಾಯ್ಕ, ರಾಜು ಎಂ. ನಾಯ್ಕ, ಮತ್ತು ರಾಜೇಂದ್ರ ನಾಯ್ಕ ಮತ್ತು ಹಿರಿಯ ವಕೀಲರಾದ ಶ್ರೀ ವಿ. ಎಂ. ಭಂಡಾರಿ ಯವರು ಶುಭ ಹಾರೈಸಿಮಾತನಾಡಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪಿ. ಎನ್. ಭಟ್ಟರವರು ಸ್ವಾಗತಿಸಿ ಸಾಳೇಹಿತ್ತಲರವರ ಕಾರ್ಯವೈಕರಿಯನ್ನು ಶ್ಲಾಘಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಲಕ್ಕಿಯವರು ತನ್ನ ಸೇವಾ ಕಾಲದಲ್ಲಿ ಸಹಕಾರ ನೀಡಿದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ನಿರ್ದೇಶಕರುಗಳಿಗೆ, ಸಿಬ್ಬಂದಿಗಳು ಮತ್ತು ಗ್ರಾಹಕರಿಗೆ ಧನ್ಯವಾದಗಳನ್ನು ಹೇಳಿದರು, ಸಂತೃಪ್ತಿಯಿoದ ಸೇವಾ ನಿವೃತ್ತಿ ಹೊಂದುತ್ತಿದ್ದು, ಗೌರವಿಸಿದ ಎಲ್ಲರಿಗೂ ಅಭಿನಂದನೆಯಗಳನ್ನು ಸಲ್ಲಿಸದರು. ಸಿಬ್ಬಂದಿಗಳ ಪರವಾಗಿ ಶ್ರೀ ಬಾಲಚಂದ್ರ ಗೌಡ ಮಾತನಾಡಿದರು.. ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳು, ಪಿಗ್ಮಿ ಸಂಗ್ರಾಹಕರುಗಳು ಮತ್ತು ಗ್ರಾಹಕರು ಹಾಜರಿದ್ದು ಶುಭಕೋರಿದರು.