ಹಿರೇಗುತ್ತಿ: ವಸ್ತುವಿನ ಶ್ರೇಷ್ಠತೆ,ಕರ್ತೃವಿನ ಹಿರಿಮೆ,ಪುರುಷಾರ್ಥ ಪ್ರತಿಪಾದನೆ, ಆಧ್ಯಾತ್ಮ ಚಿಂತನೆ ಈ ಎಲ್ಲಾ ದೃಷ್ಟಿಯಿಂದಲೂ ವಾಲ್ಮೀಕಿ ಉತ್ತುಂಗ ಸ್ಥಾನದಲ್ಲಿ ನಿಲ್ಲುತ್ತಾನೆ. ಅದೆಂತಹ ಚಿತ್ರವೆಂದರೆ “ರಾಮೋ ವಿಗ್ರಹವಾನ್ ಧರ್ಮಃ ಎಂದೇ ತೃಪ್ತರಾಗುತ್ತಾರೆ. ಹೀಗೆ ಕಾವ್ಯ – ಆಧ್ಯಾತ್ಮ- ಚರಿತ್ರೆ ಮೂರನ್ನು ಏಕತ್ರ ಸಂಯೋಜಿಸಿದ ಆದಿಕವಿ ವಾಲ್ಮೀಕಿ ನಿತ್ಯ ಪಾರಾಯಣ ಗೃಂಥವನ್ನು ನಮಗೆ ನೀಡಿದ್ದಾರೆ.
ಅಲ್ಲದೇ ಈಗ ವಾಲ್ಮೀಕಿ ರಾಮಾಯಣದ ಮೇಲೆ ಜಗತ್ತಿನಾದ್ಯಂತ ಮರುನೋಟ ಹರಿದಿದೆ”* ಎಂದು ಹಿರೇಗುತ್ತಿ *ಸೆಕೆಂಡರಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಸಣ್ಣಪ್ಪ ಗಾಂವಕರ ನುಡಿದರು. ಅವರು ಹಿರೇಗುತ್ತಿ ಹೈಸ್ಕೂಲ್ ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ವಾಲ್ಮೀಕಿಯವರ ನೀತಿ – ಬೋಧನೆ ಗಳನ್ನು ಪಾಲಿಸುವ ಮಹತ್ತರ ಜವಬ್ದಾರಿಯಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ *ಬಾಲಚಂದ್ರ ಹೆಗಡೆಕರ್. ನಾಗರಾಜ ನಾಯಕ. ಮಹಾದೇವ ಗೌಡ. ವಿಶ್ವನಾಥ ಬೇವಿನಕಟ್ಟಿ. ಇಂದಿರಾ ನಾಯಕ. ಶಿಲ್ಪಾ ನಾಯಕ. ಜಾನಕಿ ಗೊಂಡ. ದೇವಾಂಗಿನಿ ನಾಯಕ. ಗೋಪಾಲಕೃಷ್ಣ ಗುನಗಾ. ಉಪಸ್ಥಿತರಿದ್ದರು