ಕರೊನಾ ಯೋಧ-ವೈದ್ಯನ ಅಂತ್ಯ ಸಂಸ್ಕಾರ : ದುಃಖದ ವಾತಾವರಣ

ಅಂಕೋಲಾದಲ್ಲಿಂದು 4 ಕೋವಿಡ್ ಕೇಸ್
ಸಕ್ರೀಯ ಕೇಸ್ 69
ಅಂಕೋಲಾ : ಜಿಲ್ಲೆಯಲ್ಲಿಂದು ಕರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ದ್ವಿಶತಕದ ಗಡಿ ದಾಟಿದ್ದು ಇದೇ ವೇಳೆ ತಾಲೂಕಿನಲ್ಲಿಯೂ 4 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. 2 ಪ್ರಕರಣಗಳು ಈ ಹಿಂದಿನ ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದ್ದು, ಇನ್ನೆರಡು ಪ್ರಕರಣಗಳು ಜ್ವರಲಕ್ಷಣಗಳಿಂದ ಕೂಡಿದ ಐ.ಎಲ್.ಐ ಮಾದರಿ ಎನ್ನಲಾಗಿದೆ. ಇಂದು ಒಟ್ಟೂ 57 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, 69 ಸಕ್ರೀಯ ಪ್ರಕರಣಗಳಿವೆ.
ಕರೊನಾ ಯೋಧ-ವೈದ್ಯನ ಅಂತ್ಯ ಸಂಸ್ಕಾರ : ಮೂರು ದಶಕಗಳಿಂದೀಚೆಗೆ ತಾಲೂಕಿನ ಬಹುತೇಕ ಜನತೆಗೆ ವಿಶೇಷ ಆರೋಗ್ಯ ಸೆವೆ ನಿಡುತ್ತಾ, ಭರವಸೆಯ ಬೆಳಕಾಗಿ ಸಾವಿರಾರು ಜೀವಗಳ ಉಳಿವಿಗೆ ಕಾರಣರಾಗಿದ್ದ ಆರ್ಯ ಮೆಡಿಕಲ್ ಸೆಂಟರನ ಖ್ಯಾತ ವೈದ್ಯ ಅವಿನಾಶ ತಿನೇಕರ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆ ಬಳಿ ತಂದಾಗ, ಕುಟುಂಬಸ್ಥರು, ಆಸ್ಪತ್ರೆ ಸಿಬ್ಬಂದಿಗಳಲ್ಲಿ ದುಃಖದ ಕಟ್ಟೆ ಒಡೆದು ಕಣ್ಣೀರು ಸುರಿಸುವ ದೃಶ್ಯ ಮನುಕಲಕುವಂತಿತ್ತು. ಅಕ್ಕ-ಪಕ್ಕದಲ್ಲೇ ನೆರೆದಿದ್ದ ಗಣ್ಯರು-ಸಾರ್ವಜನಿಕರನೇಕರು ಸಹ ಕಂಬನಿ ಮಿಡಿಯುತ್ತಿರುವುದು ಕಂಡುಬಂತು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ಕುಟುಂಬಸ್ಥರು ಪಿ.ಪಿ.ಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಇದೇ ವೇಳೆ ಕರೊನಾ ವಾರಿಯರ್ಸ ಸಿಬ್ಬಂದಿಯೋರ್ವ ಸುರಕ್ಷಿತ ಕಿಟ್ ಧರಿಸದೇ ಅಕ್ಕ-ಪಕ್ಕದಲ್ಲೇ ತಿರುಗಾಡುತ್ತಿರುವುದು ಸರಿಯಲ್ಲಾ ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ತಾಲೂಕಾ ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯಕ, ಪಿ.ಎಸ್.ಐ ಈಸಿ ಸಂಪತ್ ಮತ್ತು ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಿದರು.
ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- SSLC ಯಲ್ಲಿ ಸಾಧನೆ ಮಾಡಿದ ರೈತ ಕುಟುಂಬದ ಕನ್ನಡದ ಕುವರಿಗೆ ಇಂಜಿನೀಯರ್ ಆಗೋ ಕನಸು: ಹೆಸರಿಗೆ ತಕ್ಕಂತೆ ಇದೆ ಗ್ರಾಮೀಣ ಭಾಗದ ಆದರ್ಶ ಪ್ರೌಢಶಾಲೆ
- ಯುದ್ಧ ಸಿದ್ಧತೆ ಹಿನ್ನಲೆ: ಉಪವಾಸ ಸತ್ಯಾಗ್ರಹ ಮುಂದಕ್ಕೆ
- ಅತ್ಯಂತ ಸುಸಜ್ಜಿತವಾದ ಮಳಿಗೆ ಮಾರಾಟಕ್ಕಿದೆ: ಕೂಡಲೇ ಸಂಪರ್ಕಿಸಿ
- ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಮೇ 10 ರಂದು ಪ್ರವೇಶ ದಾಖಲಾತಿ ಪರೀಕ್ಷೆ
- ಆಕ್ಸಿಸ್ ಬ್ಯಾಂಕ್ನಲ್ಲಿ ಬೆಂಕಿ ಅನಾಹುತ: ಅಪಾರ ಹಾನಿ