
86 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 80ಕ್ಕೆ ಏರಿಕೆ
ಸೆಪ್ಟೆಂಬರ್ 14 ರಿಂದ ಮಂಜಗುಣಿ ದೇವಸ್ಥಾನದಲ್ಲಿ ಭಕ್ತರ ಸೇವೆಗೆ ಅವಕಾಶ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 117 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರ 14,ಅಂಕೋಲಾ 10, ಕುಮಟಾ 12,ಹೊನ್ನಾವರ 9, ಭಟ್ಕಳ 22, ಸಿದ್ದಾಪುರ 5, ಶಿರಸಿ 25,ಯಲ್ಲಾಪುರ 11, ಹಳಿಯಾಳ 8 ಮತ್ತು ಜೋಯ್ಡಾದಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಇದೇ ವೇಳೆ 86 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾ 6, ಅಂಕೋಲಾ 4,ಕುಮಟಾ 25, ಹೊನ್ನಾವರ 17, ಭಟ್ಕಳ 17, ಹಳಿಯಾಳದಲ್ಲಿ 16 ಮಂದಿ ಬಿಡುಗಡೆಯಾಗಿದ್ದಾರೆ.
ಮೃತರ ಸಂಖ್ಯೆ 80ಕ್ಕೆ ಏರಿಕೆ
ಜಿಲ್ಲೆಯ ಅಂಕೋಲಾದಲ್ಲಿ ಇಂದು ಒಂದು ಸಾವಾಗಿದ್ದು, ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.
ಇಂದು 117 ಕೇಸ್ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,804ಕ್ಕೆ ಏರಿಕೆಯಾಗಿದೆ.
ಸೆಪ್ಟೆಂಬರ್ 14 ರಿಂದ ಮಂಜಗುಣಿ ದೇವಸ್ಥಾನದಲ್ಲಿ ಭಕ್ತರ ಸೇವೆಗೆ ಅವಕಾಶ
ಶಿರಸಿ: ತಾಲೂಕಿನ ಪುಣ್ಯ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೆ.14ರಿಂದ ನಿತ್ಯದ ಎಲ್ಲ ಸೇವೆಗಳಿಗೂ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳು ಸರ್ಕಾರದ ನಿಯಮದಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ
- ನಾಟಿ ವೈದ್ಯ ಬೆಳಂಬಾರದ ಹನುಮಂತಗೌಡರ ಮನೆಯಲ್ಲಿ ಹತ್ತು ಸಾವಿರ ಧನ್ವಂತರಿ ಜಪ, ಹೋಮಹವನ: ಸಮಸ್ತ ಜನರ ಆರೋಗ್ಯ ಸೌಭಾಗ್ಯಕ್ಕೆ ಪ್ರಾರ್ಥನೆ
- ಉಗ್ರರ ದಾಳಿ ಬಳಿಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಿರುವ ವ್ಯಾಪಾರಿಗಳು, ರೈತರು: ವೀಳ್ಯದೆಲೆ ರಪ್ತು ಮಾಡುವುದಿಲ್ಲ ಎಂದ ಬೆಳೆಗಾರರು