ಉದ್ದೇಶಿತ ಅಲಗೇರಿ ವಿಮಾನ ನಿಲ್ದಾಣಕ್ಕೆ ಪದ್ಮಶ್ರೀ ಸುಕ್ರಿ ಗೌಡರ ಹೆಸರಿಡಿ
ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ
ಅಂಕೋಲಾ : ತಾಲೂಕಿನಲ್ಲಿ ರವಿವಾರ ಒಟ್ಟೂ 6 ಹೊಸ ಕೋವಿಡ್ ಕೇಸಗಳು ದಾಖಲಾಗಿದೆ. ಇಂದು ಅವರ್ಸಾ ವ್ಯಾಪ್ತಿಯ ದಂಡೆಭಾಗದಲ್ಲಿ 2, ಭಾವಿಕೇರಿ, ಬೇಲೇಕೇರಿ, ಅಡಿಗೋಣ ಮತ್ತು ಲಕ್ಷ್ಮೇಶ್ವರ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.
ಸೊಂಕು ಮುಕ್ತ ಓರ್ವರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 46 ಮಂದಿ ಸಹಿತ ಒಟ್ಟೂ 81 ಪ್ರಕರಣ ಸಕ್ರಿಯಾಗಿದೆ. ತಾಲೂಕಿನ ವಿವಿಧಡೆಯಿಂದ ಇಂದು ಒಟ್ಟೂ 123 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ಸುಕ್ರಜ್ಜಿ ಹೆಸರಿಡಲು ಆಗ್ರಹ :
ಉದ್ದೇಶಿತ ಅಲಗೇರಿ ವಿಮಾನ ನಿಲ್ದಾಣಕ್ಕೆ ಪದ್ಮಶ್ರೀ ಪುರಸ್ಕøತ ಬಡಗೇರಿಯ ಸುಕ್ರಿ ಗೌಡರ ಹೆಸರನ್ನಿಡುವಂತೆ ಕ.ರ.ವೇ ತಾಲೂಕಾಧ್ಯಕ್ಷ ಸುನೀಲ್ ನಾಯ್ಕ ಹೊನ್ನೇಕೇರಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಉಪಾಧ್ಯಕ್ಷ ಪ್ರವೀಣ ನಾಯ್ಕ, ಸಂಘಟನಾ ಕಾರ್ಯದರ್ಶಿ ಪ್ರಸನ್ನ ಕೆ. ನಾಯ್ಕ, ವಿನಾಯಕ ನಾಯ್ಕ, ಸುಬ್ರಹ್ಮಣ್ಯ ನಾಯ್ಕ, ಉಮೇಶ ನಾಯ್ಕ ಉಪಸ್ಥಿತರಿದ್ದರು.
ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
- ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
- ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
- ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ