- ಅಂಕೋಲಾದಲ್ಲಿಂದು 4 ಕೊವಿಡ್ ಕೇಸ್ : ಗುಣಮುಖ 5 : ಸಕ್ರಿಯ 105
- ಮಾಸ್ಕ ಧರಿಸದಿದ್ದವರಿಗೆ ಕೊರೊನಾ ಪರೀಕ್ಷೆ : ಡಿಸಿ ಎಚ್ಚರಿಕೆ
- ಉತ್ತಮವಾಗಿ ಸೇವೆ ಸಲ್ಲಿಸಿದ್ದ ಡಾ.ಅರ್ಚನಾ : ನೂತನ ಟಿಎಚ್‍ಓ ಆಗಿ ಡಾ.ನಿತಿನ್
ಅಂಕೋಲಾ : ತಾಲೂಕಿನಲ್ಲಿ ಬುಧವಾರ ಒಟ್ಟೂ 4 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಬೊಳೆ, ಅಸಲಗದ್ದೆ, ಕೋಡ್ಸಣಿ, ಬಳಲೆ ವ್ಯಾಪ್ತಿಯಲ್ಲಿ ತಲಾ 1 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.
ಸೋಂಕುಮುಕ್ತರಾದ 5 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂಐಸೋಲೇಶನಲ್ಲಿರುವ 73 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 105 ಪ್ರಕರಣಗಳು ಸಕ್ರಿಯವಾಗಿದೆ. ಇಂದು ತಾಲೂಕಿನ ವಿವಿಧ ಪ್ರದೇಶಗ ಳಿಂದ ಒಟ್ಟೂ 242 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಮಾಸ್ಕ ಧರಿಸದಿದ್ದವರಿಗೆ ಕೊರೊನಾ ಪರೀಕ್ಷೆ : ಡಿಸಿ ಎಚ್ಚರಿಕೆ
ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ ಧರಿಸುವುದು ಕಡ್ಡಾಯವಾಗಿದ್ದು, ಮಾಸ್ಕ ಧರಿಸದಿದ್ದವರಿಗೆ ಈವರೆಗೆ ದಂಡ ವಿಧಿಸಲಾಗುತ್ತಿತ್ತು. ಆದರೂ ಕೆಲ ಸಾರ್ವಜನಿಕರು ಅಸಡ್ಡೆ ತೋರಿ ಓಡಾಡುತ್ತಿರುವುದನ್ನು ಗಮನಿಸಿರುವ ಜಿಲ್ಲಾಡಳಿತ, ಅಂತವರನ್ನು ನಿಯಂತ್ರಿಸಲು ಕೋವಿಡ್ ಟೆಸ್ಟ್ ಗೆ ಒಳಪಡಿಸುವ ವಿನೂತನ ಯೋಜನೆ ರೂಪಿಸಿದೆ. ಈ ಹಿಂದಿನ ದಂಡ ವಿಧಾನಕ್ಕೆ ಸರ್ಕಾರದ ವಿರುದ್ಧ ಕೆಲ ನಾಗರಿಕರು, ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಸಾರ್ವಜನಿಕರ ಆರೋಗ್ಯ ಜಾಗೃತಿಯನ್ನೇ ಉದ್ದೇಶವಾಗಿಸಿಕೊಂಡಿರುವ ಜಿಲ್ಲಾಡಳಿತ, ಕೊರೊನಾ ಟೆಸ್ಟ್ ಭಯದಿಂದಾದರೂ ಸಾರ್ವಜನಿಕರು ಎಚ್ಚೆತ್ತು ಕೊಳ್ಳಲಿ ಎಂದು ನಿರ್ಧರಿಸಿದಂತಿದೆ.
ಈ ಕುರಿತು ತಹಶೀಲ್ದಾರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿಯೂ ಜಿಲ್ಲಾಧಿಕಾರಿಗಳು ತಾಲೂಕಿನ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿರುವು ಕುರಿತು ಧೃಡಿಕರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕುಮಟಾ ಎ.ಸಿ.ಅಜೀತ್.ಎಂ, ತಹಸೀಲ್ದಾರ ಉದಯ ಕುಂಬಾರ ಹಾಜರಿದ್ದರು.
ಉತ್ತಮವಾಗಿ ಸೇವೆ ಸಲ್ಲಿಸಿದ್ದ ತಾಲೂಕಾ ಆರೋಗ್ಯಾಧಿಕಾರಿ
ಈ ಹಿಂದೆ ಬೆಳೆಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದ ಡಾ. ಅರ್ಚನಾ ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ನಾಲ್ಕುವರೆ ವರ್ಷದ ಅವಧಿಯಲ್ಲಿ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅತ್ಯುತ್ತಮ ಸೇವೆ ನೀಡಿ ದ್ದಾರೆಂದೇ ಹೇಳಬಹುದಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿಯಂತೂ ನಿರಂತರ ಕಾರ್ಯದಕ್ಷತೆ ಮರೆದು, ಹಲವು ಒತ್ತಡದ ಪರಿಸ್ಥಿತಿಯಲ್ಲಿಯೂ ಸರ್ಕಾರ-ಇಲಾಖೆ ಮತ್ತು ಸಾರ್ವಜನಿಕರ ಕೊಂಡಿ ಯಾಗಿ ಸಮೂದಾಯದ ಆರೋಗ್ಯ ಕಾಳಜಿ ಮತ್ತು ಜಾಗೃತಿಗೆ ಶಕ್ತಿಮೀರಿ ಪ್ರಯತ್ನಿಸಿದ್ದಾರೆ ಎನ್ನಲಾಗಿದ್ದು ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತೀವೆ.
ಡಾ.ಅರ್ಚನಾ ನಾಯ್ಕ ಬುಧವಾರ ತಮ್ಮ ಪ್ರಭಾರ ಹುದ್ದೆಯನ್ನು ಹಾರವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿದ್ದ ನಿತಿನ ಹೊಸಮೇಲ್ಕರ್ ಅವರಿಗೆ ಹಸ್ತಾಂತರಿಸಿ, ಈ ಹಿಂದಿನ ಬೆಳೆಸೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಮುಂದುವರಿಸಿದ್ದಾರೆ. ನೂತನ ಟಿಎಚ್‍ಓ ಆಗಿ ಡಾ.ನಿತಿನ್ ಅಧಿಕಾರ ವಹಿಸಿಕೊಂಡಿದ್ದಾರೆ.
ಯಲ್ಲಾಪುರದಲ್ಲಿ 3 ಮಂದಿಗೆ ಕರೊನಾ
ಯಲ್ಲಾಪುರ: ಪಟ್ಟಣದಲ್ಲಿಂದು ಮೂರು ಜನರಿಗೆ ಕರೊನಾ ಸೋಂಕು ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 106 ಕ್ಕೆ ಏರಿಕೆಯಾಗಿದೆ.
ಕಡ್ಲಗದ್ದೆಯಲ್ಲಿ 2 ಹಾಗೂ ಶಾರದಾಗಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಇಂದು 9 ಜನರು ಗುಣಮುಖರಾಗಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ