ದೇವಸ್ಥಾನ ಕಳ್ಳತನ ಪ್ರಕರಣ: ಆರೋಪಿ ಅರ್ಚಕನ ಸುಳಿವು ಆಧರಿಸಿ 24 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಫೈನಾನ್ಸ್ ನಲ್ಲಿ ಅಡವಿಟ್ಟಿದ್ದ
ಪೊಲೀಸರ ಕಾರ್ಯಾಚರಣೆ
ಭಟ್ಕಳ : ತಾಲೂಕಿನ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಳ್ಳತನ ಪ್ರಕರಣಕ್ಕೆ ಸಂಭoದಿಸಿದoತೆ ಆರೋಪಿಯಿಂದ 513.8 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಯಲ್ಲಾಪುರ ಮೂಲದ ಸತೀಶ ಭಟ್ ಎಂದು ತಿಳಿದು ಬಂದಿದ್ದು, ಈತನನ್ನು ಅಕ್ಟೋಬರ್ 23 ರಂದು ಫೋಲಿಸ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣವನ್ನು ಯಲ್ಲಾಪುರದ ಮಣಿಪುರಂ ಪೈನಾನ್ಸ ಮತ್ತು ಮುತ್ತೋಟ್ ಫೈನಾನ್ಸ್ ನಲ್ಲಿ ಅಡವಿಟ್ಟು ಹಣ ಪಡೆದಿರುವ ಬಗ್ಗೆ ಮಾಹಿತಿ ದೊರೆತಿತ್ತು.
ಅದರಂತೆ ಮಣಿಪುರಂ ಪೈನಾನ್ಸ್ ಮತ್ತು ಮುತ್ತೋಟ್ ಫೈನಾನ್ಸ್ ನಿಂದ ಒಟ್ಟು 23 ಬಗೆಯ 24,15,340 ರೂಪಾಯಿಯ 513.8 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಉ.ಕ.ಜಿಲ್ಲಾ ಎಸ್. ಪಿ. ಶಿವಪ್ರಕಾಶ ದೇವರಾಜ ,ಎಡಿಶನಲ್ ಎಸ್. ಪಿ. ಎಸ್ ಭದ್ರೀನಾಥ ಇವರ ಮಾರ್ಗದರ್ಶನ ದಲ್ಲಿ ,ಎ.ಎಸ್.ಪಿ.ನಿಖಿಲ್ ಬಿ. ಇವರ ನೇತ್ರತ್ವದಲ್ಲಿ ವಿಶೇಷಚ ತಂಡ ರಚಿಸಿ ಇದರ ಉಸ್ತುವಾರಿಯನ್ನು ಸಿ.ಪಿ.ಐ ದಿವಾಕರ ಇವರಿಗೆ ನೀಡಲಾಗಿತ್ತು,
ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ದೇವರ ಲಕ್ಷಾಂತರ ಚಿನ್ನಾಭರಣ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿತ್ತು. 670 ಗ್ರಾಂ ತೂಕದ ಚಿನ್ನಾಭರಣ ಹಾಗೂ 225 ಗ್ರಾಂ ತೂಕದ ಬೆಳ್ಳಿ ಆಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಇವುಗಳ ಮೌಲ್ಯ ಅಂದಾಜು 30 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಹಿಂದೆ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಸತೀಶ್ ಭಟ್ ಅವರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಈ ಅನುಮಾನದ ಆಧಾರದ ಮೇಲೆ ತನಿಖೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆ ಯಲ್ಲಿ ಭಟ್ಕಳ ಗ್ರಾಮಾಂತರ ಠಾಣಾ ಪಿ.ಎಸ್. ಐ., ಓಂಕಾರಪ್ಪ, ನಗರ ಠಾಣಾ ಪಿ.ಎಸ್.ಐ. ಭರತಕುಮಾರ, ಮುರುಡೇಶ್ವರ ಠಾಣಾ ಪಿ.ಎಸ್ಐ. ರವೀಂದ್ರ ಬೀರಾದಾರ,ಹಾಗೂ ಗ್ರಾಮೀಣ ಠಾಣೆಯ ಎ. ಎಸ್.ಐ ಮಂಜುನಾಥ ಗೌಡರ್, ರಾಮಚಂದ್ರ ನಾಯ್ಕ , ಸಿಬ್ಬಂದಿಗಳಾದ ಮಹೇಶ ಪಟಗಾರ್, ಸಂತೋಷ ಹೊನ್ನಾಳ, ಮೋಹನ ಪೂಜಾರಿ, ದೀಪಕ ನಾಯ್ಕ, ನಾಗರಾಜ ಮೊಗೇರ , ಗಣೇಶ ಗಾಂವಕರ, ಅಶೋಕ ನಾಯ್ಕ, ದಿನೇಶ ನಾಯಕ ,ದೇವು ನಾಯ್ಕ , ಲೋಕೇಶ ಕತ್ತಿ, ರಾಜು ಗೌಡ , ಈರಣ್ಣ ಪೂಜಾರಿ, ಮಲ್ಲಿಕಾರ್ಜುನ ನಾಯ್ಕ, ಸತೀಶ ಪೂಜಾರಿ, ಮಲ್ಲಿಕಾರ್ಜುನ ಉಟಗಿ, ನಿಂಗನ ಗೌಡ ಪಾಟೀಲ್, ರವಿ ಪಟಗಾರ್ ಹಾಗೂ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಗಳಾದ ಸುಧೀರ ಮಡಿವಾಳ, ರಮೇಶ ನಾಯ್ಕ , ಅಣ್ಣಪ್ಪ ಬುಡಗೇರಿ, ಚಾಲಕರಾದ ದೇವಾರಜ್ ಮೊಗೇರ ಉಪಸ್ಥಿತರಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.