
ಯಲ್ಲಾಪುರ: ಹಿಂದಿನ ಕಲಾವಿದರು ಕಲೆಗಾಗಿ ಜೀವನವನ್ನೇ ಮುಡಿಪಿಟ್ಟು ಸಾಧನೆ ಮಾಡಿದ್ದಾರೆ. ಅವರ ಆದರ್ಶಗಳು ಯುವ ಕಲಾವಿದರಿಗೆ ಮಾರ್ಗದರ್ಶಿಯಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲಾ ಸಭಾಭವನದಲ್ಲಿ ಯಕ್ಷಗಾನ ಅಕಾಡೆಮಿಯಿಂದ ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರ ಕುರಿತು ಹೊರತಂದ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಕಲಾವಿದ ಗೋಡೆ ನಾರಾಯಣ ಹೆಗಡೆ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಲೆಯತ್ತ ಬರಬೇಕು. ಸ್ತ್ರೀ ವೇಷವನ್ನು ಸ್ತ್ರೀಯರೇ ನಿರ್ವಹಿಸುವಂತಾಗಬೇಕು ಎಂದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಗೋಡೆ ನಾರಾಯಣ ಹೆಗಡೆ ಕಲಾ ಸೇವೆ ಕುರಿತು ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ ನಡೆಯಿತು. ಕಲಾ ಸಿದ್ಧಿ ಬಗ್ಗೆ ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಸಾಕ್ಷ್ಯ ಚಿತ್ರದ ಅನುಭವಗಳ ಕುರಿತು ಇತಿಹಾಸಕಾರ ಲಕ್ಷ್ಮೀಶ ಹೆಗಡೆ ಸೋಂದಾ ಮಾತನಾಡಿದರು.
ವಿಸ್ಮಯ ನ್ಯೂಸ್, ಶಿರಸಿ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಹೊಸ ಶೋಧನೆಗಳು ಭಾರತದ ನಿಜವಾದ ಅಸ್ಮಿತತೆ: ಡಾ. ಅಶೋಕ ಪ್ರಭು
- ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅವಕಾಶ ಮಾಡಿಕೊಟ್ಟರೆ ನೆತ್ತಿಯ ಮೇಲೆ ಕತ್ತಿ ಕಟ್ಟಿಕೊಂಡು ಇದ್ದಂತೆ: ಬಂಗಾರಮಕ್ಕಿಯ ಧರ್ಮದರ್ಶಿ ಮಾರುತಿ ಗುರೂಜಿ
- ಅಸಮರ್ಪಕ ವಿದ್ಯುತ್ ಪೂರೈಕೆಗೆ ಬೇಸತ್ತ ಸಾರ್ವಜನಿಕರು : ಕಾಡುತ್ತಿದೆ ಬೀದಿ ದೀಪದ ಸಮಸ್ಯೆ
- ಲಿಂಗನಮಕ್ಕಿ ಜಲಾಶಯ ಭರ್ತಿ : 11 ಗೇಟ್ ನಿಂದ 15 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
- ಯಶಸ್ವಿ ಉದ್ಯಮಿ, ಕಾಂಗ್ರೆಸ್ ಧುರೀಣ ಯಶೋಧರ ನಾಯ್ಕ ನಿಧನ