
ಯಲ್ಲಾಪುರ: ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ 50 ಲಕ್ಷ ರೂಪಾಯಿ ಹವಾಲಾ ಹಣ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಯಲ್ಲಾಪುರದ ಜೋಡುಕೆರೆ ಬಳಿ ನಡೆದಿದೆ.
ಗುಜರಾತ್ ಮೂಲದ ದಿನೇಶ ಠಾಕೂರ (34), ಪಂಕಜಕುಮಾರ ಪಟೇಲ್ (40), ಗೋವಿಂದ ಪಟೇಲ್ (50), ಮುಖೇಶ ಪಟೇಲ್ (55), ಉಪೇಂದ್ರ ಪಟೇಲ್ (47) ಬಂಧಿತ ಆರೋಪಿಗಳು. ಬೆಳಗಾವಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎ 51 ಎಎಫ್ 9490 ನಂಬರಿನ ಗಣೇಶ ಟ್ರಾವೆಲ್ಸ್ ಬಸ್ ನಲ್ಲಿ ಸಾಗಿಸುತ್ತಿದ್ದಾಗ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಅದರಂತೆ ಪರಿಶೀಲನೆ ನಡೆಸಿದಾಗ ಹವಾಲ ಹಣದ ಸಹಿತ ಆರೋಪಿಗಳು ಪತ್ತೆಯಾಗಿದ್ದು ಎಲ್ಲರನ್ನು ಬಂಧಿಸಲಾಗಿದೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ಯಲ್ಲಾಪುರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ವಿದ್ಯುತ್ ತಂತಿ ತುಂಡಾಗಿ ಬಿದ್ದು ಮನೆಗೆ ತೆರಳುತ್ತಿದ್ದ ಯುವಕ ದುರ್ಮರಣ
- ಅಂಗಡಿಗೆ ಬಂದು ಸಾಮಾನು ಖರೀದಿಸುವ ನೆಪ ಮಾಡಿಕೊಂಡು ಮಹಿಳೆಯ ಮಾಂಗಲ್ಯಸರ ದೋಚಿದ ದುಷ್ಕರ್ಮಿಗಳು
- ಮಳೆ ಅವಾಂತರ: ಮಣ್ಣಿನ ರಾಶಿಗೆ ನುಗ್ಗಿದ ಸಾರಿಗೆ ಬಸ್
- ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆಯ ಅಬ್ಬರ : ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ