ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತಿಚೆಗೆ ಗಾಂಜಾ ಮಾರಾಟ ಪ್ರಕರಣ ಹೆಚ್ಚುತ್ತಿದೆ. ಗೋಕರ್ಣ, ಶಿರಸಿ, ಭಟ್ಕಳದ ಬಳಿಕ ಇದೀಗ ಕಾರವಾರದ ಕಾಲೇಜೊಂದರ ಹಿಂಬದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಕಾರವಾರದ ದಿವೇಕರ್ ಕಾಲೇಜು ಹಿಂಭಾಗದಲ್ಲಿ ಗಾಂಜಾ ಮಾರಾಟ ಮಾಡುತಿದ್ದ ಕಡವಾಡದ ಯುವಕ ದೀಪಕ್ ಕಡವಾರ್ಕರ್ ಎಂಬುವವನನ್ನು ಮಾಲು ಸಮೇತ ಪೊಲೀಸರು ಬಂಧಿಸಿದ್ದಾರೆ.
ಬoಧಿತನಿoದ 234 ಗ್ರಾಂ ತೂಕದ 25 ಸಾವಿರ ಮೌಲ್ಯದ ಗಾಂಜಾ ,ಮೊಬೈಲ್ ,ಕೃತ್ಯಕ್ಕೆ ಬಳಸಿದ ಬೈಕ್ ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ,. ಕಾರ್ಯಾಚರಣೆಯಲ್ಲಿ ಕಾರವಾರದ ಪಿ.ಎಸ್.ಐ ಸಂತೋಷ್ ಕುಮಾರ್ .ಎಮ್ ಸೇರಿದಂತೆ ಸಿಬ್ಬಂದಿಗಳು ಇದ್ದರು.
ವಿಸ್ಮಯ ನ್ಯೂಸ್, ಕಾರವಾರ