ರಾಗ ಗಂಗಾವತರ
ಸರ್ವ ಪ್ರಹರ ರಾಗ ದರ್ಶನ
ಸವಿಮರ್ಶ ರಾಗಪ್ರಸ್ತುತೀಕರಣ
ಕುಮಟಾ: ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಮತ್ತು ಚಂದಗುಳಿಯ ನಾಗೇಂದ್ರ-ರೋಹಿಣಿ ನವದಂಪತಿಗಳ ಪ್ರಾಯೋಜಕತ್ವದಲ್ಲಿ ಮೂರು ದಿನಗಳ ಶಾಸ್ತ್ರೀಯ ಸಂಗೀತ ಸಮ್ಮೇಳನವನ್ನು ಕತಗಾಲದ ಸತ್ಸಂಗಭವನದ ಧ್ಯಾನಮಂದಿರ ಪರಿಸರದಲ್ಲಿ ಹಮ್ಮಿಕೊಳ್ಳಲಾಗಿದೆ. 26 ರಂದು ಸಂಜೆ 4ಕ್ಕೆ ಕರ್ಕಿಯ ದೈವಜ್ಞ ಮಠದ ಪೂಜಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ದಿ. 27, 28 ರಂದು ಬೆಳಿಗ್ಗೆ 10 ರಿಂದ ರಾತ್ರಿ 9 ರ ವರೆಗೆ ಸಂಗೀತ ಸಮಾರಾಧನೆ ಜರುಗಲಿದೆ.
ನಾಡಿನ ಮತ್ತು ದೇಶಸ್ತರದ ಖ್ಯಾತಿಯ ಹಿರಿಯ ಗಾಯಕರು, ಉದಯೋನ್ಮುಖ ಕಲಾವಿದರು, ವಿದ್ಯಾರ್ಥಿಗಳು ಗಾನ-ವಾದನ-ನರ್ತನ ಪ್ರಸ್ತುತಪಡಿಸಲಿದ್ದಾರೆ. ಅನುಭವಿ ಗಾಯಕ, ಲೇಖಕ ಹುಬ್ಬಳ್ಳಿಯ ಕೃಷ್ಣರಾವ ಇನಾಮದಾರ ಮತ್ತು ಸಿತಾರ ವಾದಕ, ಸಂಗೀತ ವಿಮರ್ಶಕ ಶ್ರೀನಿವಾಸ ಜೋಶಿಯವರಿಗೆ ಕಲಾಶ್ರೀ ಸಂಗೀತ ಸಾಧಕ ಪ್ರಶಸ್ತಿಪ್ರದಾನ ಮಾಡಲಾಗುವುದು. ಲೇಖಕಿ ಧಾರವಾಡದ ಸುಧಾ ಚಿಕ್ಕಬಳ್ಳಾಪುರ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್ ಎನ್ ಅಂಬಿಗ ಹಾಗು ಸಂಯೋಜಕ ಡಾ ಕೆ ಗಣಪತಿ ಭಟ್ಟ ತಿಳಿಸಿದ್ದಾರೆ.
ಸಮ್ಮೇಳನದ ವಿಶೇಷತೆ: ಶಾಸ್ತ್ರೀಯ ಸಂಗೀತ ಸಮ್ಮೇಳನವಾಗಿರುವುದರಿಂದ ಸಾಧಕ ಕಲಾವಿದರು ರಾಗ ಗಾಯನದಲ್ಲಿ ವಿಲಂಬಿತ, ಮಧ್ಯ, ದ್ರುತ ಲಯಗಳನ್ನು, ಮಂದ್ರ-ಮಧ್ಯ-ತಾರ ಸಪ್ತಕಗಳನ್ನು, ಸಮಯ ನಿಯಮಗಳನ್ನು ಬಳಸುತ್ತಾರೆ. ಶ್ರೋತೃಗಳ, ವಿದ್ಯಾರ್ಥಿಗಳ, ಪರೀಕ್ಷಾರ್ಥಿಗಳ ಅರ್ಹತೆ ಹೆಚ್ಚಿಸುವಂತೆ ಪ್ರಸ್ತುತಪಡಿಸುವ ರಾಗದ ವಿಮರ್ಶಾತ್ಮಕ ವಿವರಣೆ ಇರುತ್ತದೆ. ಸಪ್ತ ತಾಳಗಳ ಬಳಕೆಯಾಗುತ್ತದೆ. ಹಾಡುವ ಸಾಹಿತ್ಯದ ಸ್ಪಷ್ಟತೆ ಇರುತ್ತದೆ. ಆಗ್ರಾ, ಕಿರಾಣಾ, ಗ್ವಾಲಿಯರ, ಜಯಪುರ ಮುಂತಾದ ಘರಾಣೆ ಗಾನಶೈಲಿಗಳ ಸ್ಪಷ್ಟ ಪರಿಚಯವಾಗುತ್ತದೆ. ಖ್ಯಾಲ, ಠುಮರಿ, ಟಪ್ಪಾ ಮುಂತಾದ ಗಾನಶೈಲಿಗಳ ಬಳಕೆ ಹೆಚ್ಚಿರುತ್ತದೆ.
ಗಾಯನ ವಿಭಾಗದಲ್ಲಿ ಬೆಂಗಳೂರಿನವರಾದ ಮೋಹಿನಿ ಜೋಶಿ, ನಿಶಾಂತ ಪಣಿಕರ, ಮನೋಹರ ಪಟವರ್ಧನ, ರೋಹಿಣಿ ಭಟ್ಟ, ಹುಬ್ಬಳ್ಳಿಯ ರೇಖಾ ಹೆಗಡೆ, ಧಾರವಾಡದ ಡಾ ಶಾಂತಾರಾಮ ಹೆಗಡೆ, ಗೋಪಾಲಕೃಷ್ಣ ಭಾಗವತ, ಗದಗದ ಶಾಂಭವಿ ಹರಪನಹಳ್ಳಿ, ಬಿಹಾರದ ಸಾಕ್ಷಿ ದರ, ಮುಂಬಯಿಯ ಡಾ ಗಾಯತ್ರಿ ಆಠಲೆ, ಅಜಯ ಕಶ್ಯಪ, ಸೊಲ್ಲಾಪುರದ ವಿಶಾಲ ಮಾರಗೊಡೆ, ಸಿರ್ಸಿಯ ಅನೂಷಾ ಹೆಗಡೆ, ಶ್ರುತಿ ಭಟ್ಟ, ಹಡಿನಬಾಳದ ಶಿವಾನಂದ ಭಟ್ಟ, ಕುಮಟಾದ ಲಕ್ಷಿö್ಮ ಹೆಗಡೆ, ಯಲ್ಲಾಪುರದ ದತ್ತಣ್ಣ ಚಿಟ್ಟೇಪಾಲ, ಗಣಪತಿ ಹೆಗಡೆ, ಸಿದ್ಧಾಪುರದ ಸತೀಶ ಹೆಗಡೆ, ಉಡುಪಿಯ ಶ್ರೀಪತಿ ರಾವ, ದೇವಿದಾಸ ಹೆಗಡೆ, ದಯಾಲತಾ ರೈ, ಡಾ. ಸುಮತಿ ನಾಯಕ ಹಾಡಲಿದ್ದಾರೆ.
ವಾದನ ವಿಭಾಗದಲ್ಲಿ ಹುಬ್ಬಳ್ಳಿಯ ನಿಖಿಲ ಜೋಶಿ, ಸಿರ್ಸಿಯ ಚಂದ್ರಕಲಾ ಹೆಗಡೆ ಸಿತಾರ ನುಡಿಸಲಿದ್ದಾರೆ. ಕತಗಾಲದ ರೋಹಿಣಿ ಭಟ್ಟ, ಮಂಗಳೂರಿನ ಅನಘಾ ವೆಂಕಟರಾಮನ ವಾಯೋಲಿನ ಪ್ರಸ್ತುತಪಡಿಸಲಿದ್ದಾರೆ.
ತಬಲಾ ಸಾಥ: ಯಶವಂತ ಬೋಂದ್ರೆ, ಶಶಿಭೂಷಣ ಗುರ್ಜರ, ಗುರುರಾಜ ಅಡುಕೋಳ, ಎನ್ ಜಿ ಹೆಗಡೆ, ನಾಗರಾಜ ವೈದ್ಯ, ವಿ.ಟಿ ಭಟ್ಟ, ನಾಗೇಂದ್ರ ಭಟ್ಟ, ಪ್ರದೀಪ ಕೋಟೆಮನೆ, ಶ್ರೀರಾಮ ಭಾಗವತ, ಯೊಗಾನಂದ ಭಟ್ಟ, ಅಕ್ಷಯ ಜೋಶಿ, ಶಶಿಕಿರಣ ಉಡುಪಿ ಭಾಗವಹಿಸಲಿದ್ದಾರೆ.
ಸಂವಾದಿನಿ ಸಾಥ: ಪ್ರಕಾಶ ಹೆಗಡೆ, ಭರತ ಹೆಬ್ಬುಲುಸು, ನರಸಿಂಹ ಕೋಮಾರ, ವಾಯ್ ಆರ್ ಕಾರ್ತಿಕ, ಸತೀಶ ಹೆಗ್ಗಾರ, ಜಯಂತಿ ಗಾಂವಕಾರ, ಎಮ್ ಹೇಮಂತಕುಮಾರ, ರೋಹಿಣಿ ಭಟ್ಟ ಮುಂತಾದವರು
ಭರತನಾಟ್ಯ ವಿಭಾಗದಲ್ಲಿ ಸ್ವಾತಿ ಹೆಗಡೆ ಧನಲಕ್ಷ್ಮೀ ಮೊಗೆರ, ಪಲ್ಲವಿ ಗಾಯತ್ರಿ ಪ್ರದರ್ಶನ ನೀಡಲಿದ್ದಾರೆ. ನಯನಾ ಕಾಮತ, ಅನಂತ ವಾಜಗಾರ, ಎಸ್ ಶಂಭು ಭಟ್ಟ, ಗೀತಾ ದಾತಾರ, ಶ್ರೀಧರ ಷಡಕ್ಷರಿ, ಶ್ರಿಧರ ಪ್ರಭು, ಶೇಷಾದ್ರಿ ಅಯ್ಯಂಗಾರ ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಡಾ ಕೆ ಗಣಪತಿ ಭಟ್ಟ 9448232435
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888