Important
Trending

ಬೈಕ್, ಬುಲೆರೋ ಡಿಕ್ಕಿ: ಬೈಕ್ ಸವಾರ ಸಾವು

ಶಿರಸಿ: ಬೈಕ್ ಹಾಗೂ ಬುಲೆರೋ ವಾಹನ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಬಂಕನಾಳ ರಸ್ತೆಯಲ್ಲಿ ಸಂಭವಿಸಿದೆ. ತಾಲೂಕಿನ ಮಾಳಂಜಿಯ ಸಂಜೀವ ನಾಯ್ಕ ಮೃತಪಟ್ಟ ಬೈಕ್ ಸವಾರ. ಶಿರಸಿ ಕಡೆಯಿಂದ ಬಂಕನಾಳಕ್ಕೆ ತೆರಳುತ್ತಿದ್ದ ಬೈಕ್ ಹಾಗೂ ಬಂಕನಾಳ ಕಡೆಯಿಂದ ಶಿರಸಿ ಕಡೆಗೆ ಆಗಮಿಸುತ್ತಿರುವ ಬುಲೇರೋ ವಾಹನ ಡಿಕ್ಕಿಯಾಗಿತ್ತು. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button