Uttara Kannada
Trending

ಭಟ್ಕಳದಲ್ಲಿ ಲಾಕ್‌ಡೌನ್ ಸಡಿಲ: ನಾಳೆಯಿಂದ ಏನುಂಟು? ಏನಿಲ್ಲ?

ಭಟ್ಕಳ : ತಾಲೂಕಿನ 5 ಕಂಟೈನ್ಮೆAಟ್ ಜೋನಗಳಾದ ಮದೀನಾ ಕಾಲೋನಿ ,ಉಸ್ಮಾನಿಯ ರಸ್ತೆ,ಗುಡ್ ಲಕ್ ರಸ್ತೆ, ಕೋಕ್ರಿ ನಗರ, ಸುಲ್ತಾನ್ ಸ್ಟಿçÃಟ್ ಹೊರತು ಪಡಿಸಿ ಶುಕ್ರವಾರದಿಂದ ಭಟ್ಕಳದಲ್ಲಿ ಬೆಳಿಗ್ಗೆ 8 ಗಂಟೆಯಿAದ ಮಧ್ಯಾಹ್ನ 2 ಗಂಟೆಯವರೆಗೆ ಕೆಲವು ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶ ನೀಡಿ, ಲಾಕ್ ಡೌನ್ ನಲ್ಲಿ ಕೊಂಚ ಸಡಿಲಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು. ಗುರುವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರಿಗೆ ಕೆಲವು ಅಂಗಡಿ ಮುಂಗಟ್ಟು ತೆರೆಯುವಂತೆ ಅನುಮತಿ ನೀಡಿದರು.ನಂತರ ಪತ್ರಕರ್ತರ ಸಲಹೆ ಮೆರೆಗೆ ಸಮಯದ ನಿಗದಿಯನ್ನು ಬೆಳಿಗ್ಗೆ 8 ಗಂಟೆಯಿAದ 2 ಗಂಟೆಯವರಿಗೆ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು ತಾಲೂಕಿನ 5 ಕಂಟೈನ್ಮೆAಟ್ ಜೋನ್ ಹೊರತು ಪಡಿಸಿ ಬೇಕರಿ, ಮೆಡಿಕಲ್, ದಿನಸಿ, ಬ್ಯಾಂಕ್, ಗ್ಯಾರೇಜ್, ಸಲೂನ್, ಪೆಟ್ರೋಲ್ ಬಂಕ್, ಕಟ್ಟಡ ನಿರ್ಮಾಣದ ಸಾಮಗ್ರಿಗಳ ಅಂಗಡಿಗಳಿಗೆ ತೆರೆಯುವಂತೆ ನಂತರ ಜೂನ್ 1 ಸೋಮವಾರದಿಂದ ರಿಕ್ಷಾ ಓಡಾಟ, ಆಟೋ ಮೊಬೈಲ್, ಬಟ್ಟೆ, ಸೂಪರ್ ಮಾರ್ಕೆಟ್, ಗಳನ್ನು ನಿಯಮ ಬದ್ಧವಾಗಿ ತೆರೆಯಲು ಅವಕಾಶ ನೀಡಲಾಗುತ್ತಿದೆ. ಆಟೊಗಳಲ್ಲಿ ನಿಮಯ ಮೀರಿ ಹೆಚ್ಚಿನವರನ್ನು ಕುಳಿಸಿಕೊಂಡು ಪ್ರಯಾಣ ಮಾಡದಂತೆ ಎಚ್ಚರಿಕೆ ಯನ್ನು ನೀಡಿದ್ದಾರೆ
ಈ ಎಲ್ಲಾ ಸಡಳಿಕೆ ಗಳು ಜೂನ್ 8 ರವರೆಗೆ ಜಾರಿಯಲ್ಲಿದ್ದು, ನಂತರ ದಿನಗಳಲ್ಲಿ ಕೇಸ್ ಬರದ್ದಿದ್ದರೆ . ಇನ್ನಷ್ಟು ಸಡಿಲಿಕೆಯಾಗಿ ಸಂತೆ ಮಾರ್ಕೆಟ್ ಚಿಂತನೆ ಮಾಡಲಿದ್ದೇವೆ. ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದೆ. ಅಂಗಡಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು ಅಂಗಡಿಕಾರರ ಜವಾಬ್ದಾರಿ. ಇದಕ್ಕೆ ವಿಫಲವಾದಲ್ಲಿ ಅವರ ಅಂಗಡಿ ಪರವಾನಿಗೆ ರದ್ದಾಗಲಿದೆ ಎಂದು ಹೇಳಿದರು.
ಈ ವೇಳೆ ಸಾರ್ವಜನಿಕರು, ಮಾಧ್ಯಮದವರು, ಮುಖಂಡರ ಅಭಿಪ್ರಾಯ ಪಡೆದು ಮುಂಬರುವ ದಿನಗಳಲ್ಲಿ ಹೇಗೆ ನಿಯಂತ್ರಣ ಇಡಬೇಕಿದೆ ಎಂಬ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದರು.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button