
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 46 ಕೋವಿಡ್ ಕೇಸ್ ದಾಖಲಾಗಿದೆ. ಕಾರವಾರ 4, ಅಂಕೋಲಾ11, ಕುಮಟಾ 11, ಹೊನ್ನಾವರ 6, ಭಟ್ಕಳ 7, ಶಿರಸಿ 2, ಸಿದ್ದಾಪುರ 1, ಯಲ್ಲಾಪುರ 4 ಸೇರಿ 46 ಕೋವಿಡ್ ದಾಖಲಾಗಿದೆ.
ಇದೇ ವೇಳೆ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕಾರವಾರ 1, ಅಂಕೋಲಾ 1, ಭಟ್ಕಳದಲ್ಲಿ ಒಬ್ಬರು ಸೇರಿ ಮೂವರು ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 758 ಕ್ಕೆ ಏರಿಕೆಯಾಗಿದೆ.

ಅಂಕೋಲಾದಲ್ಲಿ 11 ಹೊಸ ಪಾಸಿಟಿವ್ ಕೇಸ್| ನಾಳೆ 430 ಡೋಸ್ ಲಸಿಕೆ ಲಭ್ಯ
ಅಂಕೋಲಾ ಅ 23: ತಾಲೂಕಿನಲ್ಲಿ ಸೋಮವಾರ 11 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.ಸೋಂಕು ಮುಕ್ತರಾದ 13 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 52 ಕ್ಕೆ ಏರಿಕೆಯಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ 24ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 28 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.

ಆರಂಭದಿಂದ ಈವರೆಗೆ ತಾಲೂಕಿನಲ್ಲಿ 3582ಸೋಂಕು -ಪ್ರಕರಣಗಳು ವರದಿಯಾಗಿದ್ದು , ಇಂದಿನವರೆಗೆ ಒಟ್ಟೂ 71 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.
ತಾಲೂಕಿನ ವಿವಿಧೆಡೆ ಇಂದು ಒಟ್ಟೂ 2297ಡೋಸ್ ಕೊವಿಡ್ ಲಸಿಕೆಗಳನ್ನು ನೀಡಲಾಗಿದೆ. ನಾಳೆ ದಿನಾಂಕ 24 ರ ಮಂಗಳವಾರ ಬೊಗ್ರಿಗದ್ದೆ ಹಿ.ಪ್ರಾ.ಶಾಲೆ (60), ರಾಮನಗುಳಿ ಪ್ರಾ. ಆ.ಕೇಂದ್ರ (40), ಸಹಿಪ್ರಾ ಶಾಲೆ ಕಾರೇಬೈಲ್ (260), ಸ.ಹಿಪ್ರಾ ಶಾಲೆ ತಳಗದ್ದೆಯಲ್ಲಿ (70) ಡೋಸ್ ಸೇರಿದಂತೆ ಒಟ್ಟೂ 430 ಡೋಸ್ ಲಸಿಕೆ ನೀಡಲಾಗುತ್ತಿದ್ದು,ಅವುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಡೋಸ ಸಮಾನ ಹಂಚಿಕೆಗೆ (50:50) ಕಾಯ್ದಿರಿಸಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾದಿoದ ಆಯೋಜನೆ
- ನೀಲಗೋಡ ಜಾತ್ರೆ ಯಶಸ್ವಿಯಾಗಿ ಸಂಪನ್ನ: ಯಕ್ಷಿ ಚೌಡೇಶ್ವರಿ ದೇವಿಯ ದರ್ಶನ ಪಡೆದ ಅಪಾರ ಭಕ್ತರು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ
