Follow Us On

WhatsApp Group
Uttara Kannada
Trending

ಚಾಲಕನನ್ನು ನೋಡಿ ಬೆಚ್ಚಿಬಿದ್ದ ಜನರು: ಕಾಡಿದ ಕರೊನಾ ಭಯ!

ಲಾರಿಯ ಒಳಗೆ ನಿತ್ರಾಣವಾಗಿ ಬಿದ್ದಿದ್ದ ಚಾಲಕ
ಶರಾವತಿ ಸರ್ಕಲ್‌ನಲ್ಲಿ 3 ದಿನದಿಂದ ನಿಂತಿದ್ದ ಲಾರಿ
ಚಾಲಕನ ಗಂಟಲ ದ್ರವದ ಮಾದರಿ ರವಾನೆ

ಹೊನ್ನಾವರ: ಪಟ್ಟಣದ ಶರಾವತಿ ಸರ್ಕಲ ಸಮೀಪವಿರುವ ಶಿಲ್ಪಾ ಕಾಫಿ ಹೌಸ್ ಬಳಿ ಕಳೆದ ಎದುರು ಮೂರುದಿನಗಳಿಂದ ನಿಂತಿದ್ದ ತಮಿಳುನಾಡು ಪಾಸಿಂಗ್ ಹೊಂದಿದ್ದ ಲಾರಿಯನ್ನು ಪೊಲೀಸರು ಪರಿಶೀಲಿಸಿದಾಗ ಒಳಗಡೆ ನಿತ್ರಾಣನಾಗಿ ಬಿದ್ದಿದ್ದ ಚಾಲಕನನ್ನು ಕಂಡ ಸಾರ್ವಜನಿಕರು ಹೌಹಾರಿ ದೂರ ಸರಿದ ಘಟನೆ ನಡೆದಿದೆ.
ಅಷ್ಟಕ್ಕೂ ಲಾರಿಯ ಒಳಗಿದ್ದ ಚಾಲಕನೇನು ಮೃತಪಟ್ಟಿರಲಿಲ್ಲ. ಸಾರ್ವಜನಿಕರು ಆ ಪರಿ ಭಯಬೀಳಲು ಕಾರಣವೇನು ಗೊತ್ತಾ..? ಅದೇ ಕೊರೊನಾ ಭಯ..! ಲಾರಿ ತಮಿಳುನಾಡು ಮೂಲದ್ದು ಎನ್ನುವುದನ್ನು ತಿಳಿದ ಮಂದಿ ನಿತ್ರಾಣನಾಗಿ ಬಿದ್ದಿರುವ ಚಾಲಕನ ನೆರವಿಗೆ ದಾವಿಸುವ ಬದಲು ತಮ್ಮ ತಮ್ಮ ರಕ್ಷಣೆಗೆ ದೂರ ಸರಿದು ನಿಂತು ಬಿಟ್ಟರು.
ಪಿ.ಎಸ್.ಐ ಶಶಿಕುಮಾರ ಹಾಗೂ ವಾಹನ ಚಾಲಕ ಶಿವಾನಂದ ಚಿತ್ರಗಿ ಕೈಗವಸು ತೊಟ್ಟು ಡ್ರೈವರ್ ಪಕ್ಕದ ಡೋರ್ ತೆಗದು ನೋಡಿದರೆ ಚಾಲಕನ ಕೈ ಕಾಲುಗಳ ಚಲನೆ ಅಷ್ಟೇ ಕಂಡುಬಂದಿತು. ಈತ ಕೊರೊನಾ ಸೋಂಕಿನಿಂದ ನರಳಿಯೇ ಅಶಕ್ತನಾಗಿದ್ದಾನೆ ಎಂದು ಸಾರ್ವಜನಿಕರು ಮಾತನಾಡತೊಡಗಿದಾಗ ರಕ್ಷಣೆಗೆ ಯಾರೂ ಮುಂದೆ ಬರದಿದ್ದಾಗ ಪಟ್ಟಣಪಂಚಾಯತ ಸದಸ್ಯ ಸುರೇಶ ಹೊನ್ನಾವರ ಹಾಗೂ ಟ್ಯಾಕ್ಸಿ ಡ್ರೈವರ್ ಶ್ರೀಕಾಂತ ಮೇಸ್ತ ಪಿ.ಪಿ.ಇ ಕಿಟ್ ದರಿಸಿ ಅಶಕ್ತ ಚಾಲಕನನ್ನು ಅಂಬುಲೆನ್ಸ್ಗೆ ಹತ್ತಿಸಲು ನೆರವಾದರು.
ತಾಲೂಕಾಸ್ಪತ್ರೆಗೆ ಒಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಐಸೋಲೇಷನ್ ವಾರ್ಡನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ. ಚಾಲಕನ ಗಂಟಲ ದ್ರವದ ಮಾದರಿಯನ್ನು ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಲಾರಿ ರಸ್ತೆ ಪಕ್ಕ ನಿಲ್ಲಿಸಿ ಡ್ರೈವರ್ ಮಲಗಿರಬಹುದು ಎಂದು ಸಾರ್ವಜನಿಕರು ತಿಳಿದುಕೊಂಡ ಕಾರಣ ಮತ್ತು ಕ್ಲೀನರ್ ಇಲ್ಲದೇ ಒಬ್ಬರೇ ಲಾರಿಗಳನ್ನು ಚಾಲನೆ ಮಾಡಿಕೊಂಡು ಬಂದಿರುವ ಕಾರಣಕ್ಕೆ ಈ ಘಟನೆ ಎರಡುದಿನ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.

“ಇದರ ವಿಡಿಯೋ ಸುದ್ದಿಯನ್ನು 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ”

ವಿಸ್ಮಯ ನ್ಯೂಸ್,ಶ್ರೀಧರ್ ನಾಯ್ಕ, ಹೊನ್ನಾವರ

Back to top button