Uttara Kannada
Trending

74ರ ವೈದ್ಯನ ಸೈಕಲ್ ಪ್ರೀತಿ

ಜೂನ್ 3 ರ ವಿಶ್ವ ಬೈಸಿಕಲ್ ದಿನಾಚರಣೆ

ಅಂಕೋಲಾ : ಏಪ್ರಿಲ್ 1 ರ ಮೂರ್ಖರ ದಿನಾಚರಣೆಯಿಂದ ಹಿಡಿದು, ಪರಿಸರ ದಿನಾಚರಣೆ, ಏಡ್ಸ್ ದಿನಾಚರಣೆ, ತಂಬಾಕು ದಿನಾಚರಣೆ, ಅಪ್ಪ-ಅಮ್ಮ-ಪ್ರೇಮಿಗಳ ದಿನಾಚರಣೆ ಯಂತ ಸಾವಿರಾರು ಆಚರಣೆಗಳು ರೂಢಿಯಲ್ಲಿವೆಯಾದರೂ ಜೂನ್ 3 ರ ವಿಶ್ವ ಬೈಸಿಕಲ್ ದಿನಾಚರಣೆ ಯನ್ನು ಆಚರಿಸುವವರು ಕಡಿಮೆಯಂದೇ ಹೇಳಬಹುದು.
ತಾಲೂಕಿನ ಹೆಸರಾಂತ ಖಾಸಗಿ ವೈದ್ಯರಾದ ಎನ್.ಎಂ.ಹೆಗಡೆಯವರು ತಮ್ಮ ಬಾಲ್ಯದ 10ನೇ ವಯಸ್ಸಿ ನಿಂದ ಸೈಕಲ್ ತುಳಿಯುವುದನ್ನು ಕಲಿತು ವೃತ್ತಿ ಬದುಕಿನ ಹಲವು ಸಂದರ್ಭಗಳಲ್ಲಿ ಸೈಕಲ್ ಏರಿ ಸವಾರಿ ಮಾಡುತ್ತಾ ಬಂದಿದ್ದಾರೆ. 74ರ ಹರೆಯದ ವೈದ್ಯರಾದ ಇವರು ನಿರಂತರ 64 ವರ್ಷಗಳಿಂದ ಸೈಕಲ್ ಪ್ರೇಮ ಬೆಳಸಿಕೊಂಡು ಬಂದ ಸವಿನೆನಪಿಗಾಗಿ ಅಂಕೋಲಾದಿಂದ ಕಾರವಾರದ ಅಗರ್ಾಕ್ಕೆ ಹೋಗಿ ಬರುವ ಅಂದಾಜು 64 ಕೀ.ಮಿ. ಸೈಕಲ್ ಸವಾರಿ ಮಾಡಲು ಉತ್ಸುಕರಾಗಿದ್ದು, ಬದಲಾಗುತ್ತಿರುವ ಹವಾ ಮಾನದ ಪರಿಣಾಮಗಳು ಇವರ ಸೈಕಲ್ ಸವಾರಿಗೆ ಅಡ್ಡಿಯಾಗದಿರಲಿ ಎನ್ನುವುದು ಆಪ್ತರ ಆಶ ಯವಾಗಿದೆ.
ಮೂಲತಃ ಶಿರಸಿ ತಾಲೂಕಿನ ಕಡವೆ ಗ್ರಾಮದವರಾದ ನಾರಾಯಣ ಮಹಾಬಲೇಶ್ವರ ಹೆಗಡೆ ಇವರು ಹುಟ್ಟೂರಿಗೆ ಭೇಟಿ ನೀಡಿದಾಗಲೆಲ್ಲಾ, ಸುತ್ತಲಿನ ಸೋಂದಾ ಮಠ, ಸಹಸ್ರಲಿಂಗ ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿಗೆ ಸೈಕಲ್ ಮೇಲೆಯೇ ಸಂಚ ರಿಸಿದ ಸಾಕಷ್ಟು ಉದಾಹರಣೆಗಳಿವೆ. 1973 ರಲ್ಲಿ ಕಾರವಾರದಲ್ಲಿ ವೈದ್ಯ ವೃತ್ತಿ ಆರಂಭಿಸಿ, ಮಾಜಾಳಿ ಯಿಂದ ಕಡವಾಡಕ್ಕೆ ಸೈಕಲ್ ಮೇಲೆಯೇ ತೆರಳುತ್ತಿದ್ದರು. 1974 ರಿಂದ ಅಂಕೋಲಾಕ್ಕೆ ಬಂದು ನೆಲೆಸಿ ಇಲ್ಲಿಯೇ ಖಾಸಗಿ ಕ್ಲಿನಿಕ್ ತೆರೆದು ಈಗಲೂ ಧೀಘರ್ಾವಧಿ ಸೇವೆಸಲ್ಲಿ ಸುತ್ತಿರುವ ಡಾ. ಹೆಗಡೆಯವರು, ಖ್ಯಾತ ವಕೀಲೆ ಶಾಂತಾ ಹೆಗಡೆಯವರನ್ನು ವಿವಾಹವಾಗಿ 44 ವಸಂತ ಪೂರೈಸಿದ ಹಿನ್ನಲೆಯಲ್ಲಿ ತಮ್ಮ ಸೈಕಲ್ನ್ನೇರಿ 44 ಕೀ.ಮೀ. ಪ್ರಯಾಣ ಮಾಡಿದ್ದರು.
ಕುಟುಂಬದ ವೃತ್ತಿ ಮತ್ತು ಆದಾಯದಿಂದ ಅತ್ಯಂತ ಶ್ರೀಮಂತವಾಗಿ, ಕಾರ್ ಬಂಗ್ಲೆಯಂತಹ ಐಶಾರಾಮಿ ಬದುಕಿನ ನಡುವೆಯೂ ಎಂದೂ ತಮ್ಮ ಸೈಕಲ್ ಪ್ರೀತಿಯ ನಂಟು ಕಳೆದುಕೊಳ್ಳಲು ಸಿದ್ದರಿಲ್ಲದ ವೈದ್ಯರು ಸೈಕಲ್ ತುಳಿಯುವುದರಿಂದ ದೇಹಾರೋಗ್ಯ ವೃದ್ಧಿಸುವುದಲ್ಲದೇ ಪರಿಸರ ಪೂರಕ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಜಗತ್ತನ್ನೇ ತಲ್ಲಣಿಸಿರುವ ಮಹಾಮಾರಿ ಕೊರೊನಾ, ಶ್ರೀಮಂತ-ಬಡವ ಭೇದಗಳನ್ನು ದೂರ ಮಾಡಿ ಜನರಿಗೆ ಪರಿಸರ ಪೂರಕ ಆರೋಗ್ಯಯುತ ಜೀವನದ ಮಹತ್ವವನ್ನು ತಿಳಿಸುತ್ತಿರುವ ಇಂದಿ ನ ಕಾಲಘಟ್ಟದಲ್ಲಿ ವೈದ್ಯ ಎನ್.ಎಂ. ಹೆಗಡೆಯಂತವರು ವಿಶ್ವ ಬೈಸಿಕಲ್ ದಿನಾಚರಣೆಯ ರಾಯಬಾರಿ ಗಳಂತೆ ಕಂಗೊಳಿಸುತ್ತಿರುವುದು ಆಧುನಿಕ ಭರಾಟೆಯಲ್ಲಿ ತಲ್ಲೀನರಾದ ಯುವ ಜನತೆಗೆ ಮಾದರಿಯಾಗಿದೆ.
-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button