ಕಾರವಾರ: ಮುಂಬೈಯಿಂದ ಕುಮಟಾಕ್ಕೆ ವಾಪಾಸ್ಸಾಗಿ ಕ್ವಾರಂಟೈನ್‌ನಲ್ಲಿದ್ದ ಹೊಳೆಗದ್ದೆಯ 25 ವರ್ಷದ ಯುವತಿಯೋರ್ವಳಿಗೆ ಕರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಇದೇ ಜೂನ್ 13 ರಂದು ಮುಂಬೈ ಇಂದ ಕುಮಟಾಕ್ಕೆ ಆಗಮಿಸಿ, ಕುಮಟಾದಲ್ಲಿಯೇ ಸರಕಾರಿ ಕ್ವಾರಂಟೈನ್ ಗೆ ಒಳಗಾಗಿದ್ದ ಯುವತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಹೊರ ರಾಜ್ಯದಿಂದ ಬಂದಿರುವ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಸರಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಇದೀಗ ಇವರ ವರದಿ ಪಾಸಿಟಿವ್ ಎಂದು ಬಂದಿದ್ದು, ಒಂದು ವಾರದ ಬಳಿಕ ಕುಮಟಾದಲ್ಲಿ ಮತ್ತೊಂದು ಕರೊನಾ ಪ್ರಕರಣ ದಾಖಲಾದಂತಾಗಿದೆ. ಕಳೆದ ಒಂದು ವಾರದಿಂದ ಕುಮಟಾ ತಾಲೂಕಿನಲ್ಲಿ ಯಾವುದೇ ಹೊಸ ಕರೋನಾ ಪ್ರಕರಣ ಕಂಡುಬಂದಿಲ್ಲವಾಗಿತ್ತು. ಇದೀಗ ಮುಂಬೈನಿಂದ ಆಗಮಿಸಿದ ಯುವತಿಗೆ ಸೋಂಕು ದೃಢಪಟ್ಟಿರುವುದು ತಾಲೂಕಿನ ಜನತೆಯಲ್ಲಿ ಸ್ವಲ್ಪ ಭಯಹುಟ್ಟಿಸಿದೆ.©ವಿಸ್ಮಯ ಟಿ.ವಿ. ಮುಂಬೈನಿಂದ ಕುಮಟಾಕ್ಕೆ ಬಂದ ಇವರು ನೇರವಾಗಿ ಕ್ವಾರಂಟೈನ್‌ಗೆ ಒಳಪಟ್ಟಿದ್ದು, ಕುಟುಂಬದವರೊಂದಿಗೆ ಅಥವಾ ಯಾವುದೇ ಸಾರ್ವಜನಿಕರ ಸಂಪರ್ಕಕ್ಕೆ ಬಂದಿಲ್ಲವಾಗಿದೆ. ಸದ್ಯ ಇವರನ್ನು ಕರೊನಾ ಚಿಕಿತ್ಸೆಗಾಗಿ ಇವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಭಟ್ಕಳದಲ್ಲಿ ಮೂರು ಕೇಸ್
ದುಬೈನಿಂದ ಬಂದ ಓರ್ವ ಮಹಿಳೆ ಮತ್ತು ಮಹಾರಾಷ್ಟ್ರದಿಂದ ಬಂದ ಇಬ್ಬರು ವ್ಯಕ್ತಿ ಸೇರಿ ತಾಲೂಕಿನಲ್ಲಿ ಇಂದು 3 ಕೋರೊನಾ ಪ್ರಕರಣ ಪತ್ತೆಯಾಗಿದೆ ಜೂನ್ 13 ರಂದು ವಿಶೇಷ ವಿಮಾನ ಮೂಲಕ ದುಬೈನಿಂದ ಬಂದ ಸಾಗರ್ ರಸ್ತೆ ಡಿಪಿ ಕಾಲೋನಿಯ ವರ್ಷದ ಮಹಿಳೆ ಮತ್ತು ಮಹಾರಾಷ್ಟ್ರ ದಿಂದ ಬಂದ ಆಜಾದ್ ನಗರ 5 ಕ್ರಾಸನ ವರ್ಷದ ಯುವಕ ಹಾಗೂ ಶಿರಾಲಿ ತಟ್ಟಿಹಕ್ಕಲ್ ನಿವಾಸಿಯಾದ ವರ್ಷದ ಪುರುಷನಲ್ಲಿ ಪ್ರಕರಣ ಪತ್ತೆಯಾಗಿದೆದುಬೈನಿಂದ ಬಂದ ಮಹಿಳೆ ಮತ್ತು ಮಹಾರಾಷ್ಟ್ರದಿಂದ 22 ವರ್ಷದ ಯುವಕ ಈಗಾಗಲೇ ಸರ್ಕಾರಿ ಕ್ವಾರಂಟೈನಲ್ಲಿದ್ದಾರೆ. ಆದರೆ ಶಿರಾಲಿ ತಟ್ಟಿಹಕ್ಕಲು ನಿವಾಸಿದ 45 ವರ್ಷದ ಪುರುಷ ಜೂನ್ 8 ರಂದು ಮುಂಬೈನಿAದ ಬಂದು ಮುರುಡೇಶ್ವರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸರ್ಕಾರಿ ಕ್ವಾರಂಟೈನ ಮುಗಿಸಿ ಜೂನ್ 15 ರಂದು ಮನೆಗೆ ತೆರಳಿದವನಲ್ಲಿ ಸೋಂಕು ಪತ್ತೆಯಾಗಿರುವುದು ಕಂಡು ಬಂದಿದೆ. ಈಗ ಈತನಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕ್ಕೆ ಕಾರಣವಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಮತ್ತು ಉದಯ್ ಎಸ್ ನಾಯ್ಕ, ಭಟ್ಕಳ