ಆರು ಕರೊನಾ ದೃಢ: ಹೊನ್ನಾವರದಲ್ಲಿ ಎರಡು ವರ್ಷದ ಮಗುವಿಗೂ ಪಾಸಿಟಿವ್

ಹೊನ್ನಾವರ: 2
ಯಲ್ಲಾಪುರ: 2
ಅಂಕೋಲಾ:1
ಹಳಿಯಾಳ: 1

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಆರು ಕರೋನಾ ಫಾಸಿಟಿವ್ ವರದಿಯಾಗಿದೆ.
ಹೊನ್ನಾವರದಲ್ಲಿ ಇಂದು ಒಂದೆ ಕುಟುಂಬದ ತಂದೆ ಮತ್ತು ಮಗು ಸೇರಿ 2 ಮಂದಿಗೆ ಪಾಸಿಟಿವ್ ಬಂದಿದೆ.
ಜೂನ್ 20 ರಂದು ಮಹಾರಾಷ್ಟ್ರ ದಿಂದ ಪತ್ನಿ  ಮತ್ತು 2 ವಷದ ಮಗುವಿನ ಜೊತೆ ಹೊನ್ನಾವರಕ್ಕೆ ಆಗಮಿಸಿದ ಬಳ್ಕೂರ ಮೂಲದ  ವ್ಯಕ್ತಿ ಹೊನ್ನಾವರದ ಖಾಸಗಿ ಹೊಟೆಲ್ ನಲ್ಲಿ ಕ್ವಾರಂಟೈನಗೆ ಒಳಗಾಗಿದ್ದರು. ಇಂದು 35 ವರ್ಷದ  ಪುರುಷ ಹಾಗೂ 2 ವರ್ಷದ ಮಗುವಿನ ವರದಿ ಪಾಸಿಟಿವ್ ಎಂದು ವರದಿ ಬಂದಿದೆ. ಆದರೆ ಅವರ ಜೊತೆಗೆ ಆಗಮಿಸಿದ ಅವರ ಪತ್ನಿಯ ವರದಿ ಇನ್ನು ಬಂದಿಲ್ಲಾ ಎಂದು ಮಾಹಿತಿ ಲಭ್ಯವಾಗಿದೆ.
ಮುಂಬೈ ನಿಂದ ಬಂದಿರುವ ಹಳಿಯಾಳದ ನಾಲ್ಕು ವರ್ಷದ ಗಂಡು ಮಗು ,ಮಂಗಳೂರಿನಿಂದ ಆಗಮಿಸಿದ ಅಂಕೋಲದ 45 ವರ್ಷದ ಪುರುಷ , ಸಂಖ್ಯೆಯ ಸೊಂಕಿತ ವ್ಯಕ್ತಿ ಸಂಪರ್ಕ ಮಾಡಿರುವ ಯಲ್ಲಾಪುರದ 26 ವರ್ಷದ ಪುರುಷ, p-9167 ಸಂಖ್ಯೆಯ ಸಂಪರ್ಕ ಮಾಡಿರುವ 28 ವರ್ಷದ ಯಲ್ಲಾಪುರದ ವ್ಯಕ್ತಿಗೆ ಕರೋನಾ ಫಾಸಿಟಿವ್ ದೃಡವಾಗಿದೆ.

[sliders_pack id=”1487″]
Exit mobile version