Uttara Kannada
Trending

ಇಂದು 18 ಜನರಿಗೆ ಕರೊನಾ ಪಾಸಿಟಿವ್

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತಂಕ

ಗೋಕರ್ಣಕ್ಕೂ ಕಾಲಿಟ್ಟ ಮಹಾಮಾರಿ
ಯಲ್ಲಾಪುರದಲ್ಲಿ 7 ಕೇಸ್
ಹೊನ್ನಾವರದಲ್ಲಿ 5 ಪ್ರಕರಣ
ಸಂಜೆ ವೇಳೆಗೆ ಮತ್ತಷ್ಟು ಹೆಚ್ಚುವ ಸಾಧ್ಯತೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ಆರ್ಭಟ ಬೆಚ್ಚಿಬೀಳುವಂತಿದೆ. ದಿನೇ ದಿನೇ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಮಹಾಮಾರಿ, ಇಂದು 18 ಜನರಲ್ಲಿ ಕಾಣಿಸಿಕೊಂಡಿದೆ. ಹೊನ್ನಾವರ ತಾಲೂಕಿನ ಐವರಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು, ಮಹಾರಾಷ್ಟ್ರ‌ದಿಂದ ಬಂದ ಓರ್ವ ಮಹಿಳೆ ಮತ್ತು ಮೂವರು ಪುರುಷರು ಹಾಗು ಡೆಲ್ಲಿಯಿಂದ ಆಗಮಿಸಿದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲರನ್ನು ಈಗ ಕಾರವಾರದ ಕರೊನಾ ವಾರ್ಡಿಗೆ ಸಾಗಿಲು ವ್ಯವಸ್ಥೆ ಮಾಡಲಾಗಿದೆ. ಯಲ್ಲಾಪುರದಲ್ಲಿ ಏಳು, ಮುಂಡಗೋಡ, ಶಿರಸಿ, ಗೋಕರ್ಣದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಸಂಜೆ ವೇಳೆ ಮತ್ತಷ್ಟು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಸಂಜೆಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‌ನಲ್ಲಿ ಈ ಬಗ್ಗೆ ಮಾಹಿತಿ ಅಧಿಕೃತಗೊಳ್ಳಲಿದೆ.
ಭಾನುವಾರದ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‌ಲ್ಲಿ ಜಿಲ್ಲೆಯಲ್ಲಿ 14 ಪ್ರಕರಣ ಪ್ರಕಟವಾಗಿತ್ತು. ಜಿಲ್ಲೆಯ ಮಟ್ಟಿಗೆ ಈ ವರೆಗೆ ದಾಖಲಾದ ಪ್ರಕರಣಗಳಲ್ಲಿ ಗರಿಷ್ಠವಾಗಿತ್ತು. ಆದರೆ, ಇದೀಗ ದಿನದಿಂದ ದಿನಕ್ಕೆ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಿರುವ ಕರೊನಾ, ತನ್ನೆಲ್ಲಾ ದಾಖಲೆ ಮುರಿಯುತ್ತಲೇ ಸಾಗುತ್ತಿರುವುದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ ಧರಿಸದೆ ಓಡಾಡ ಸೇರಿದಂತೆ ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದಿದ್ರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.

[sliders_pack id=”1487″]

Related Articles

Back to top button