Follow Us On

WhatsApp Group
ಮಾಹಿತಿ
Trending

ಅಂಕೋಲಾ ರೂರಲ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಯೋಗಿತಾ ಕಾಮತ ಆಯ್ಕೆ

ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್
ಖಜಾಂಚಿಯಾಗಿ ಸಂಪದಾ ಗುನಗಾ
ಜುಲೈ 1ರಂದು ಪದಗ್ರಹಣ

ಅಂಕೋಲಾ : ತಾಲೂಕಿನ ಹೆಸರಾಂತ ಸೇವಾ ಸಂಘಟನೆಯಾದ ಅಂಕೋಲಾ ರೂರಲ್ ರೋಟರಿ ಕ್ಲಬ್ ತನ್ನ ಸಾಮಾಜಿಕ ಮತ್ತು ಹತ್ತಾರು ವಿಧಾಯಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದೆ. ಕ್ಲಬ್‍ನ ಅಧ್ಯಕ್ಷರಾಗಿ ಯೋಗಿತಾ ವಿನಾಯಕ ಕಾಮತ ಅವರ್ಸಾ, ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್ ಮತ್ತು ಖಜಾಂಚಿಯಾಗಿ ಸಂಪದಾ ಗುನಗಾ ಆಯ್ಕೆಯಾಗಿದ್ದಾರೆ. ವಿವಿಧ ಪದಾಧಿಕಾರಿಗಳನ್ನೊಳಗೊಂಡ ನೂತನ ಸಮಿತಿಯು ಜುಲೈ 1ರಂದು ಪದಗ್ರಹಣ ಮಾಡಲಿದೆ.
ಅವರ್ಸಾದ ಯುವ ಉದ್ಯಮಿ ವಿನಾಯಕ ಕಾಮತ ಇವರ ಧರ್ಮಪತ್ನಿಯಾಗಿರುವ ಯೋಗಿತಾ ಕಾಮತ ವೃತ್ತಿಯಿಂದ ಚಾರ್ಟೆಡ್ ಅಕೌಂಟೆಂಟ್ ಆಗಿ ಖ್ಯಾತಿಗಳಿಸಿದ್ದು, ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.
ಅವರ್ಸಾದ ಪ್ರತಿಷ್ಠಿತ ಜೆ.ಸಿ ಸ್ಕೂಲ್‍ನ ಮುಖ್ಯಾಧ್ಯಾಪಕರಾಗಿರುವ ರಾಘವೇಂದ್ರ ಭಟ್ ಈ ಹಿಂದೆಯೂ ಕ್ಲಬ್‍ನ ಸಕ್ರೀಯ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಖಜಾಂಚಿಯಾಗಿ ಆಯ್ಕೆಯಾಗಿರುವ ಸಂಪದಾ ಗುನಗಾ, ತನ್ನ ವಕೀಲ ವೃತ್ತಿಯ ಜೊತೆ ಜೊತೆಯಲ್ಲಿಯೇ ಕ್ರೀಡೆ, ಸಾಮಾಜಿಕ, ಸಾಂಸ್ಕøತಿಕ ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರಮುಖ ಎರಡು ಮಹಿಳಾ ಮಣಿಗಳ ಸಾರಥ್ಯದಲ್ಲಿ, ಅನುಭವಿ ಹಿರಿ-ಕಿರಿಯ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರದಲ್ಲಿ ಅಂಕೋಲಾ ರೂರಲ್ ರೋಟರಿ ಕ್ಲಬ್ ಮತ್ತಷ್ಟು ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎನ್ನುವುದು ಹಿತೈಷಿಗಳ ಆಶಯವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button