ಅಂಕೋಲಾ : ತಾಲೂಕಿನಲ್ಲಿ ಬುಧವಾರ ಮತ್ತೆ 5 ಹೊಸ ಕೋವೀಡ್-19 ಪ್ರಕರಣಗಳು ಧೃಡಪಡುವದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಭಾವಿಕೇರಿ ಮಹಿಳೆ ಸೋಂಕಿನಿಂದ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದರೆ, 13 ಪ್ರಕರಣಗಳು ಸಕ್ರಿಯವಾಗಿದೆ.
ಅಗ್ರಗೋಣ-ಶೇಡಿಕಟ್ಟಾದ ಹೊಸ 5 ಸೋಂಕಿತರ ಪೈಕಿ 80ವರ್ಷದ ವೃದ್ಧೆ ಮತ್ತು 4ವರ್ಷದ ಬಾಲಕಿಯನ್ನು ಕುಮಟಾದಲ್ಲಿ ನೂತನವಾಗಿ ಆರಂಭಿಸಲಾದ ಕೋವೀಡ್ ಹೆಲ್ತ್ ಸೆಂಟರ್ ಗೆ ದಾಖಲಿಸಲಾಗಿದ್ದು, ಉಳಿದ ಮೂವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ ನಲ್ಲಿ ತಾತ್ಕಾಲಿಕವಾಗಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು ಗುರುವಾರ ಇವರನ್ನೂ ಸಹ ಕುಮಟಾಕ್ಕೆ ಸ್ಥಳಾಂತರಿಸಲಿದ್ದಾರೆ ಎನ್ನಲಾಗಿದೆ.
ಇಂದು ಕಾಣಿಸಿಕೊಂಡ ಎಲ್ಲಾ 5ಪ್ರಕರಣಗಳು ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯಲ್ಲಿಯೇ ಕಂಡು ಬಂದಿರುವದರಿಂದ ಈ ಪ್ರದೇಶವು ಅಂಕೋಲಾದ ಕೊರೊನಾ ಹಾಟ್-ಸ್ಪೊಟ್ ಆದಂತಾಗಿದೆ. ಇಂದು ಸಹ ಆರೋಗ್ಯ ಇಲಾಖೆಯವರು ಹಲವರ ಗಂಟಲು ದ್ರವ ಸಂಗ್ರಹಿಸಿದ್ದು, ಪರೀಕ್ಷಾ ವರದಿಯನ್ನಾಧರಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸೋಂಕು ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
[sliders_pack id=”1487″]