ಉತ್ತರಕನ್ನಡದಲ್ಲಿ ಕರೊನಾ ಸ್ಫೋಟ: 80 ಕ್ಕೂ ಅಧಿಕ ಕೇಸ್?

ಭಟ್ಕಳದಲ್ಲಿ: 45
ಕುಮಟಾದಲ್ಲಿ: 20
ಹೊನ್ನಾವರ: 9

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಕರೊನಾ ಸ್ಫೋಟಗೊಂಡಿದ್ದು, 80 ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗರಿಷ್ಠಮಟ್ಟಕ್ಕೆ ಏರಿಕೆಯಾಗಿದೆ. ಅಲ್ಲದೆ, ಟ್ರಾವೆಲ್ ಹಿಸ್ಟರಿ ಇಲ್ಲದವರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಭಟ್ಕಳದಲ್ಲಿ 45 ಪ್ರಕರಣ ದಾಖಲಾಗಿದ್ದರೆ, ಕುಮಟಾದಲ್ಲಿ ಸುಮಾರು 20 ಕೇಸ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಹೊನ್ನಾವರದಲ್ಲಿ 9 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹೊನ್ನಾವರದ ಗ್ರಾಮೀಣ ಭಾಗಕ್ಕೆ ಎಂಟ್ರಿ?
62 ವರ್ಷದ ಪುರುಷ ಹಳದೀಪುರ, 34 ವರ್ಷದ ಪುರುಷ ಹಳದೀಪುರ, 27 ವರ್ಷದ ಮಹಿಳೆ ಹಳದೀಪುರ, 32 ವರ್ಷದ ಪುರುಷ ಮಾಳ್ಕೋಡು, 60 ವರ್ಷದ ಮಹಿಳೆ ವಂದೂರು, 30 ವರ್ಷದ ಪುರುಷ ಮೇಲಿನ ಮೂಡ್ಕಣಿ, 46 ವರ್ಷದ ಪುರುಷ ಮಾವಿನಕುರ್ವಾ, 14 ವರ್ಷದ ಬಾಲಕ ನಿಲ್ಕೋಡ , 36 ವರ್ಷದ ಪುರುಷ ಹೊನ್ನಾವರ ಪಟ್ಟಣ , ಸೇರಿ ಒಟ್ಟು ಹೊನ್ನಾವರ ತಾಲೂಕಿನಲ್ಲಿ ಇಂದು ಒಂಬತ್ತು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಾರವಾರದಲ್ಲಿ 5, ಕೇಸ್ ದೃಢಪಟ್ಟಿದೆ. ಶಿರಸಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಐಷೋಲೇಷನ್‍ನಲ್ಲಿದ್ದ ವ್ಯಕ್ತಿಗೂ ಸೋಂಕು ಕಾಣಿಸಿಕೊಂಡಿದೆ. ಇಂದಿನ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್‍ನಲ್ಲಿ ಜಿಲ್ಲೆಯಲ್ಲಿ ದಾಖಲಾದ ಸೋಂಕಿತರ ಸಂಖ್ಯೆ ಮತ್ತು ಇತರ ಮಾಹಿತಿ ಲಭ್ಯವಾಗಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಂದಿನ ವಿಸ್ಮಯ ನ್ಯೂಸ್ ನಲ್ಲಿ ಪ್ರಸಾರವಾಗಲಿದೆ.

[sliders_pack id=”1487″]
Exit mobile version