ಮಾಹಿತಿ
Trending

ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಸನ್ನಿಧಿ ಹೆಗಡೆಗೆ ಶ್ರೀ ದೇವಸ್ಥಾನದಿಂದ ಸನ್ಮಾನ

ಶಿರಸಿ : 2019-2020 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶ್ರೀಮಾರಿಕಾಂಬಾ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸನ್ನಿಧಿ ಮಹಾಬಲೇಶ್ವರ ಹೆಗಡೆ ನೂರಕ್ಕೆ ನೂರು ಅಂಕ ಗಳಿಸುವುದರೊಂದಿಗೆ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಈ ಹಿನ್ನೆಲೆಯಲ್ಲಿ ಶ್ರೀ ಮಾರಿಕಾಂಬಾ ದೇವಾಲಯದಿಂದ ಶ್ರೀ ದೇವಿಯ ಅನುಗ್ರಹಯುಕ್ತ ಪ್ರಸಾದದೊಂದಿಗೆ ಶಾಲು ಹೊದಿಸಿ ಗೌರವಿಸಲಾಯಿತು ಮತ್ತು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಕೀರ್ತಿ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸಿದರು.

ಈ ಸಮಯದಲ್ಲಿ ದೇವಾಲಯದ ಅಧ್ಯಕ್ಷ ಡಾ. ವೆಂಕಟೇಶ.ಎಲ್.ನಾಯ್ಕ , ಉಪಾಧ್ಯಕ್ಷರಾದ ಮನೋಹರ ಮಲ್ಮನೆ,ಧರ್ಮದರ್ಶಿಗಳಾದ ಲಕ್ಷ್ಮಣ. ಎಮ್. ಕಾನಡೆ ಮತ್ತು ಶಶಿಕಲಾ. ಜಿ. ಚಂದ್ರಾಪಟ್ಟಣ ಮತ್ತು ದೇವಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button