
- ಹಾಲಿನ ಡೈರಿಗೆ ಹಾಲು ನೀಡಿ ಬರುತ್ತಿರುವ ವೇಳೆ ಹೊಂಚುಹಾಕಿದ್ದರು
- 20 ರಿಂದ 22 ಮಂದಿ ಸೇರಿ ಕೊಲೆ?
ಭಟ್ಕಳ: ತಾಲೂಕಿನ ಬೆಣಂದೂರು ಗ್ರಾಮದಲ್ಲಿ ವ್ಯಕ್ತಿ ಯೋರ್ವನನ್ನು ಹಳೆ ದ್ವೇಷಕ್ಕಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಕೊಲೆಯಾದ ವ್ಯಕ್ತಿ ವ್ಯಕ್ತಿ ಪದ್ಮಯ್ಯ ಜಟ್ಟಪ್ಪ ನಾಯ್ಕ (44) ಎಂದು ತಿಳಿದು ಬಂದಿದೆ. ಮಧ್ಯಾಹ್ನ 3.30 ರ ಸುಮಾರಿಗೆ ಶಿರೂರಿನಲ್ಲಿರುವ ಹಾಲಿನ ಡೈರಿಗೆ ಹಾಲು ನೀಡಿ ಬರುವ ಸಂದರ್ಭದಲ್ಲಿ ಅಂದಾಜು 20 ರಿಂದ 22 ವ್ಯಕ್ತಿ ಗಳು ಸೇರಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಹಳೆ ದ್ವೇಷಕ್ಕಾಗಿ ಕೊಲೆ ಶಂಕೆ ?
ಈ ಹಿಂದೆ ಜಮೀನ ವಿಚಾರಕ್ಕಾಗಿ ಕೊಲೆಯಾದ ವ್ಯಕ್ತಿಯ ಹಾಗೂ ಇನ್ನೊಂದು ಗುಂಪಿಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ 5 /7/2020 ರಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಹಳೆ ದ್ವೇಷಕ್ಕೆ ಕೊಲೆಯಾಗಿದೆಯೆ ಎಂಬ ಅನುಮಾನ ಕಾಡುತ್ತಿದೆ. ತಾಲೂಕಾಸ್ಪತ್ರೆಗೆ ಎಎಸ್ಪಿ ನಿಖೀಲ.ಬಿ ಭೇಟಿ ನೀಡಿ, ಕೊಲೆಯಾದ ವ್ಯಕ್ತಿಯ ಸಹೋದರನ ಹೇಳಿಕೆ ಪಡೆದುಕೊಂದಿದ್ದಾರೆ.
ಇನ್ನು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಾಗಿದೆ.,
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಪ್ರಮುಖ ಸುದ್ದಿಯ ಲಿಂಕ್ ಗಳು ಇಲ್ಲಿದೆ, ಕ್ಲಿಕ್ ಮಾಡಿ ನೋಡಿ
- ವಿದ್ಯುತ್ ತಂತಿ ತುಂಡಾಗಿ ಬಿದ್ದು ಮನೆಗೆ ತೆರಳುತ್ತಿದ್ದ ಯುವಕ ದುರ್ಮರಣ
- ಅಂಗಡಿಗೆ ಬಂದು ಸಾಮಾನು ಖರೀದಿಸುವ ನೆಪ ಮಾಡಿಕೊಂಡು ಮಹಿಳೆಯ ಮಾಂಗಲ್ಯಸರ ದೋಚಿದ ದುಷ್ಕರ್ಮಿಗಳು
- ಮಳೆ ಅವಾಂತರ: ಮಣ್ಣಿನ ರಾಶಿಗೆ ನುಗ್ಗಿದ ಸಾರಿಗೆ ಬಸ್
- ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆಯ ಅಬ್ಬರ : ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ