Uttara Kannada
Trending

ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ)ನ, ಬಿಜಿ ಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್ ಕುಮಟಾ ದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಚ್ಚುಕಟ್ಟಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಸದಸ್ಯರು ಆದಂತಹ ಶ್ರೀಯುತ ವಿಷ್ಣು ಪಟಗಾರರವರು ಅತಿಥಿಗಳಾಗಿ ಆಗಮಿಸಿದ್ದು, ದೇವರಿಲ್ಲದ ದೇವಾಲಯದಲ್ಲಿ ಪೂಜೆ ಮಾಡಿದಂತೆ ಕರೋನಾ ದೆಸೆಯಿಂದ ವಿದ್ಯಾರ್ಥಿಗಳಿಲ್ಲದೆ ವಿದ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವಂತಾಯಿತು ಎಂದು ಹೇಳಿದರು.

ಕುಮಟಾ ಶಾಖಾಮಠದ ಬ್ರಹ್ಮಚಾರಿ ಶ್ರೀಗಳು ಆದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಭಾರತದ ಮಹಾಪುರುಷರ ವ್ಯಕ್ತಿತ್ವವನ್ನು ವಿದೇಶಿಗರು ಅಳವಡಿಸಿಕೊಂಡು ಮಹಾನ್ ವ್ಯಕ್ತಿಗಳಾದರು ಅದನ್ನು ನಾವು ಹೇಗೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಡಾ|| ಶಶಿಕುಮಾರ್ ಕೆ ಸಿ ರವರು ಆತ್ಮನಿರ್ಭರದ ಕುರಿತು ಮಾತನಾಡಿದರು. ಹಾಗೆಯೇ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲೀನಾ ಗೊನೇಹಳ್ಳಿಯವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೇಶವ ಗೌಡರವರು ಸ್ವಾಗತಿಸಿದರು. ಸ್ವಾತಂತ್ರ್ಯೋತ್ಸವದ ಕುರಿತು ಸಹ ಶಿಕ್ಷಕರಾದ ಶ್ರೀ ಎಮ್ ಜಿ ಹಿರೇಕುಡಿ ಹಾಗೂ ಶ್ರೀಮತಿ ಪುಷ್ಪಾ ರಾವತ್ರವರು ಮಾತನಾಡಿದರು.

ಶ್ರೀಮತಿ ರಂಜನಾ ಆಚಾರ್ಯ ಹಾಗೂ ಶ್ರೀಮತಿ ಪೂಜಾ ಭಟ್ಟರವರು ದೇಶಭಕ್ತಿಗೀತೆಯನ್ನು ಹಾಡಿ ದೇಶಕ್ಕೆ ಗೌರವ ಸೂಚಿಸಿದರು. ವಂದನಾರ್ಪಣೆಯನ್ನು ಶ್ರೀಮತಿ ಗೀತಾ ನಾಯ್ಕರವರುನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button