133 ಮಂದಿ ಗುಣಮುಖರಾಗಿ ಬಿಡುಗಡೆ
3,579ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಕುಮಟಾದಲ್ಲಿ ಏಳು ಕೇಸ್ ದಾಖಲು
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಬುಧವಾರ 131 ಕರೊನಾ ಪ್ರಕರಣ ದೃಢಪಟ್ಟಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಮುಂಡಗೋಡ 33, ಅಂಕೋಲಾ 13, ಭಟ್ಕಳ 12, ಕಾರವಾರ 2, ಕುಮಟಾ 6, ಹೊನ್ನಾವರ 6, ಶಿರಸಿಯಲ್ಲಿ 13, ಸಿದ್ದಾಪುರದಲ್ಲಿ 05, ಯಲ್ಲಾಪುರ 18, , ಹಳಿಯಾಳದಲ್ಲಿ 22, ಜೊಯಿಡಾದಲ್ಲಿ ಒಂದು ಪ್ರಕರಣ ದೃಢಪಟ್ಟಿದೆ.
ಇದೇ ವೇಳೆ, 133 ಮಂದಿ ಗುಣಮುಖರಾಗಿ ಮನೆಯಿಂದ ಬಿಡುಗಡೆಯಾಗಿದ್ದಾರೆ. ಭಟ್ಕಳ 47, ಕುಮಟಾ 49, ಕಾರವಾರ 5, ಅಂಕೋಲಾ 2, ಶಿರಸಿ 8, ಸಿದ್ದಾಪುರ 1, ಮುಂಡಗೋಡ 6, ಜೋಯ್ಡಾ 1, ಹಳಿಯಾಳದಲ್ಲಿ 14 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇಂದು 131 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,579ಕ್ಕೆ ಏರಿಕೆಯಾಗಿದೆ.
ಕುಮಟಾದಲ್ಲಿ ಏಳು ಕೇಸ್ ದಾಖಲು:
ಕುಮಟಾ: ತಾಲೂಕಿನಲ್ಲಿ ಕರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತಾಲೂಕಾ ವ್ಯಾಪ್ತಿಯಲ್ಲಿ ಇಂದು ಕೂಡ ಒಟ್ಟು 7 ಸೋಂಕಿತ ಪ್ರಕರಣಗಳು ಕಂಡುಬAದಿದೆ. ಕುಮಟಾ ಪುರಸಭಾ ವ್ಯಾಪ್ತಿಯಾದ ಕಲ್ಸಂಕಾದಲ್ಲಿಯೇ 4 ಕರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಕಲ್ಸಂಕಾದ 6 ವರ್ಷದ ಬಾಲಕ, ಕಲ್ಸಂಕಾದ 13 ವರ್ಷದ ಬಾಲಕಿ ಹಾಗೂ ಕಲ್ಸಂಕಾದ 11 ವರ್ಷದ ಇಬ್ಬರು ಬಾಲಕಿಯರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನುಳಿದಂತೆ ಕುಮಟಾದ 39 ವರ್ಷದ ಪುರುಷ, ಹೊಳೆಗದ್ದೆಯ 48 ವರ್ಷದ ಮಹಿಳೆ, ಬಗ್ಗೋಣದ 42 ವರ್ಷದ ಮಹಿಳೆಯಲ್ಲಿ ಕರೋನಾ ಸೋಂಕು ದೃಡಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568