ಹೊನ್ನಾವರದ ಒಂದೇ ಭಾಗದಲ್ಲೇ ಎಲ್ಲ ಪ್ರಕರಣ ದಾಖಲು
ಕುಮಟಾದ ಹೊಲನಗದ್ದೆ, ಬಗ್ಗೋಣ, ಗೋಕರ್ಣ, ಹೆಗಡೆಯಲ್ಲಿ ಕೇಸ್
ಹೊನ್ನಾವರ: ತಾಲೂಕಿನಲ್ಲಿ ಇಂದು 9 ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇಂದು ದಾಖಲಾದ ಎಲ್ಲಾ ಪ್ರಕರಣಗಳು ಮಂಕಿಯಲ್ಲಿಯೆ ದೃಢಪಟ್ಟಿದೆ. ಮಂಕಿಯ 44 ವರ್ಷದ ಪುರುಷ, ಕಂಚಿಕೋಡ್ಲ ಮಂಕಿಯ 30 ವರ್ಷದ ಯುವಕ, ಚಿತ್ತಾರದ 36 ಯುವಕ, 45 ಪುರುಷ, ಮಾವಿನಕಟ್ಟೆಯ 43 ವರ್ಷದ ಮಹಿಳೆ, ಮಂಕಿಯ 18 ವರ್ಷದ ಯುವಕ, 26 ವರ್ಷದ ಯುವಕ, 59 ವರ್ಷದ ಪುರುಷ, ಹಾಗು 26 ವರ್ಷದ ಯುವಕ ಸೇರಿ ಒಟ್ಟು 9 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ತಾಲೂಕಿನಲ್ಲಿ ಒಟ್ಟು 60 ಸಕ್ರೀಯ ಪ್ರಕರಣಗಳಿದ್ದು 20 ಜನರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 40 ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 9 ಕೇಸ್ ದೃಢಪಟ್ಟ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 293ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಕುಮಟಾದಲ್ಲಿ ನಾಲ್ಕು ಕೇಸ್
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 4 ಕರೊನಾ ಪ್ರಕರಣ ದಾಖಲಾಗಿದೆ. ಹೊಲನಗದ್ದೆ, ಬಗ್ಗೋಣ, ಗೋಕರ್ಣ, ಹೆಗಡೆಯಲ್ಲಿ ಇಂದು ತಲಾ ಒಂದೊoದು ಕರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕುಮಟಾ ತಾಲೂಕಿನ ಬಗ್ಗೋಣ್‌ದ 40 ವರ್ಷದ ಮಹಿಳೆ, ಹೊಲನಗದ್ದೆಯ 65 ವರ್ಷದ ಪುರುಷ, ಹೆಗಡೆಯ 43 ವರ್ಷದ ಪುರುಷ, ಗೋಕರ್ಣ ತೋರ್ಕೆಯ 67 ವರ್ಷದ ಪುರುಷನಲ್ಲಿ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.
ಈ 4 ಜನರು ಕೂಡ ಈ ಹಿಂದೆ ಸೋಂಕು ಕಾಣಿಸಿಕೊಂಡವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎನ್ನಲಾಗಿದೆ.
ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ
ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಇಲ್ಲಿದೆ
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
- ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
- ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
- ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ