ಶುಕ್ರವಾರದ ಶುಭ ಘಳಿಗೆಯಲ್ಲಿ ಆರಂಭಗೊoಡ ಗೌರಿ ಪೂಜೆ

ತಾಯಿ ಕೃಪೆಯಿಂದ ಅಂಕೋಲಾದಲ್ಲಿ ಇಂದು ಕಾಣಿಸಿಕೊಳ್ಳದ ಕರೊನಾ ಮಾರಿ

[sliders_pack id=”3491″]

ಅಂಕೋಲಾ : ಗಣೇಶ ಚತುರ್ಥಿಯ ಮುನ್ನಾದಿನ ಗೌರಿಯನ್ನು ಪ್ರತಿಷ್ಠಾಪಿಸುವ ಸಂಪ್ರದಾಯವಿದ್ದು, ಶುಕ್ರವಾರದ ಶುಭ ಘಳಿಗೆಯಲ್ಲಿ ತಾಲೂಕಿನ ಹಲವೆಡೆ ‘ಗೌರಿಮಾತೆ’ ಯನ್ನು ಶೃದ್ಧಾ-ಭಕ್ತಿಯಿಂದ ಪೂಜಿಸಲಾಗುತ್ತಿದೆ. ಪಟ್ಟಣದ ಮಹಾಕಾಳೀ ದೇವಸ್ಥಾನದಲ್ಲಿ ಕಾಳಮ್ಮ ದೇವರನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು.
ತಾಯಿಯ ಕೃಪೆಯಿಂದಲೋ ಎನ್ನುವಂತೆ ತಾಲೂಕಿನಲ್ಲಿ ಇಂದು ಯಾವುದೇ ಕರೋನಾ ಕೇಸ್‌ಗಳು ದಾಖಲಾಗಿಲ್ಲ. ಪಟ್ಟಣ ವ್ಯಾಪ್ತಿಯ ಮಠಾಕೇರಿ, ಕೋಟೆವಾಡಾ ಸೇರಿದಂತೆ ಒಟ್ಟು 46 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ.

ಗಂಟಲುದ್ರವ ಪರೀಕ್ಷೆಗೆ ಒಳಪಡಲು ತಾಲೂಕಿನ ಕೆಲವೆಡೆ ಅದ್ಯಾಕೋ ಜನತೆ ಕೊಂಚ ಹಿಂಜರಿಯುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ತಲೆನೋವಾಗಿದೆ. ಪುರಸಭೆ ವ್ಯಾಪ್ತಿಯಲ್ಲಿಯು ಇಂತಹದೇ ಘಟನೆ ಕೇಳಿಬಂದ ಹಿನ್ನಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ ಖುದ್ದು ಸ್ಥಳಕ್ಕೆ ತೆರಳಿ ಜನರ ಮನವೋಲಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ ನಾಯಕ, ಆಶಾ-ಅಂಗನವಾಡಿ- ಆರೋಗ್ಯ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಿದರು.( ತಮ್ಮ ಜೀವದ ಅಪಾಯವನ್ನು ಲೆಕ್ಕಿಸದೇ ಜನತೆಯ ಆರೋಗ್ಯ ಕಳಕಳಿಯಿಂದ ಕರ್ತವ್ಯ ನಿರ್ವಹಿಸುವ ಕರೊನಾ ವಾರಿಯರ್ಸನ ಎಲ್ಲಾ ಯೋಧರಿಗೆ ಜನತೆ ಸ್ವಯಂಪ್ರೇರಿತರಾಗಿ ಸಹಕರಿಸಲೇ ಬೇಕಿದೆ.


ನಮ್ಮೆಲ್ಲಾ ಓದುಗರಿಗೆ ಗೌರಿ –ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ; ಹಬ್ಬದ ಸಂಪ್ರದಾಯವನ್ನು ಆಚರಿಸಿ. ಶ್ರೀ ದೇವರ ಕೃಪೆ ತಮ್ಮಲ್ಲೆರ ಮೇಲಿರಲಿ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version