Uttara Kannada
Trending

ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದ ಮೀನುಗಾರ ಸಾವು

ಕಾಲು ಜಾರಿ ಅವಾಂತರ
ಆಸ್ಪತ್ರೆಗೆ ಸಾಗಿಸುವಾಗ ಸಾವು

[sliders_pack id=”3491″]

ಅಂಕೋಲಾ : ತಾಲೂಕಿನ ಬೇಲೇಕೇರಿ ವ್ಯಾಪ್ತಿಯ ಮೀನುಗಾರನೋರ್ವ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದು, ಆತನ್ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಘಟನೆ ವಿವರ : ಬೇಲೇಕೇರಿಯ ಪೊಲೀಸ್ ಸ್ಟೇಷನ ಹತ್ತಿರದ ನಿವಾಸಿ ನಾಗಪ್ಪ ಯಾದು ಕುಡ್ತಳಕರ (54) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಇತನು ಅಗಸ್ಟ 24ರಂದು ನಸುಕಿನ ವೇಳೆಯಲ್ಲಿ ಮೀನುಗಾರಿಕೆ ಮಾಡಲು ಪಾತಿ ದೋಣಿಯ ಮೇಲೆ ಅರಬ್ಬೀ ಸಮುದ್ರಕ್ಕೆ ತೆರಳಿದ್ದ ಎನ್ನಲಾಗಿದೆ.


ಬೆಳಿಗ್ಗೆ 06-15ರ ಸುಮಾರಿಗೆ ಬಲೆಯನ್ನು ಎಳೆಯುತ್ತಿದ್ದಾಗ ದೋಣಿಯಲ್ಲಿಯೇ ಕಾಲುಜಾರಿ ಕುಸಿದು ಬಿದ್ದ ಆತನನ್ನು ದಡಕ್ಕೆ ತಂದ ಆತನ ಮಗ ಮತ್ತು ಸ್ಥಳೀಯರು, ಬೇಲೇಕೇರಿ ಕರಾವಳಿ ಕಾವಲು ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರ ಪಡೆದು ಆಂಬ್ಯುಲೆನ್ಸ್ ಕರೆಯಿಸಿ ತಾಲೂಕಾ ಸರಕಾರಿ ಆಸ್ಪತ್ರೆಗೆ ಜಿಕಿತ್ಸೆಗಾಗಿ ಕೊಂಡೊಯ್ದಿದರು ಎನ್ನಲಾಗಿದೆ.

ಆ ವೇಳೆಗಾಗಲೇ ಆತ ಮೃತ ಪಟ್ಟಿರುವ ಕುರಿತು ವೈದ್ಯರು ತಿಳಿಸಿದ್ದು ಈ ಕುರಿತು ಮೃತ ನಾಗಪ್ಪ ಕುಡ್ತಳಕರನ ಮಗ ಅರವಿಂದ ಕುಡ್ತಳಕರ ಪೊಲೀಸರಿಗೆ ಸುದ್ದಿ-ದೂರು ನೀಡಿದ್ದರು. ಅಂಕೋಲಾ ಪೊಲೀಸ್ ಠಾಣೆಯ ಎ.ಎಸ್.ಐ ಚಂದ್ರಕಾoತ ಪಿ. ನಾಯ್ಕ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.


ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ
ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Related Articles

Back to top button