Join Our

WhatsApp Group
ಮಾಹಿತಿ
Trending

ಒಲೆಗೆ ಬೆಂಕಿ ಹೊತ್ತಿಸುವಾಗ ಸಂಭವಿಸಿದ ಅನಾಹುತ

ಯುವತಿಯ ಬಟ್ಟೆಗೆ ಬೆಂಕಿ
ಅರ್ಧದೇಹ ಸುಟ್ಟಿ ಗಂಭೀರ ಗಾಯ

ಕುಮಟಾ: ಯುವತಿಯೊಬ್ಬಳು ಒಲೆಗೆ ಬೆಂಕಿ ಹತ್ತಿಸುವಾಗ ಅಕಸ್ಮಾತಾಗಿ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಈ ವೇಳೆ ಯುವತಿ ತೊಟ್ಟಿದ್ದ ಬಟ್ಟೆಗೆ ಬೆಂಕಿ ತಾಗಿ, ಯುವತಿಯ ದೇಹಕ್ಕೂ ಆವರಿಸಿದೆ‌. ಬೆಂಕಿ ತಗುಲಿದ ಪರಿಣಾಮ ಅರ್ಧದೇಹವೇ ಸುಟ್ಟಿಹೋಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು ಬದುಕಿಬ ಮಧ್ಯೆ ಹೋರಾಡುತ್ತಿದ್ದಾಳೆ.

ಒಲೆಗೆ ಬೆಂಕಿ ಹೊತ್ತಿಸುವ ವೇಳೆ ಸೀಮೆ ಎಣ್ಣೆ ಸುರಿದ ವೇಳೆ, ಇದು ಬಟ್ಟೆಗೂ ತಾಗಿದ್ದು, ಹೀಗಾಗಿ ಬೆಂಕಿ ಏಕಾಏಕಿ ಹೊತ್ತಿಕೊಂಡಿದೆ‌. ಕ್ಷಣಾರ್ಧದಲ್ಲಿ ಯುವತಿಯ ಇಡೀ ದೇಹವನ್ನು ಆವರಿಸಿ, ಅರ್ಧ ದೇಹ ಸುಟ್ಟಿಹೋಗಿದೆ. ಯುವತಿಯನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ‌.

ವಿಸ್ಮಯ ನ್ಯೂಸ್ ಕುಮಟಾ

Back to top button