ಉತ್ತರಕನ್ನಡದಲ್ಲಿಂದು 101 ಕರೊನಾ ಕೇಸ್

88 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಜಿಲ್ಲೆಯಾದ್ಯಂತ ಮೂವರ ಸಾವು
ಕುಮಟಾ ತಾಲೂಕಿನಲ್ಲಿಂದು ಐದು ಕೇಸ್

[sliders_pack id=”3498″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಂದು 101 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಭಟ್ಕಳದಲ್ಲಿ ಅತಿಹೆಚ್ಚು ಅಂದರೆ 33 ಕೇಸ್ ದೃಢಪಟ್ಟಿದೆ. ಶಿರಸಿ 19, ಹೊನ್ನಾವರ 11, ಕುಮಟಾ 5, ಮುಂಡಗೋಡ 6, ಜೋಯ್ಡಾ 5, ಅಂಕೋಲಾ 2, ಹಳಿಯಾಳ ಮತ್ತು ಕಾರವಾರದಲ್ಲಿ ತಲಾ 10 ಪ್ರಕರಣ ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,618ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿಂದು ಮೂವರ ಸಾವು:

ಇದೇ ವೇಳೆ 88 ಮಂದಿ ವಿವಿಧ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 5, ಅಂಕೋಲಾ 5, ಕುಮಟಾ 8, ಹೊನ್ನಾವರ 1, ಭಟ್ಕಳ 22, ಶಿರಸಿ 9, ಸಿದ್ದಾಪುರ 1, ಯಲ್ಲಾಪುರ 4, ಮುಂಡಗೋಡ 11, ಹಳಿಯಾಳ 21, ಜೋಯ್ಡಾದಲ್ಲಿ ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೊಂದೆಡೆ, ಹೊನ್ನಾವರದಲ್ಲಿ ಇಬ್ಬರು, ಹಳಿಯಾಳದಲ್ಲಿ ಓರ್ವ ಸೇರಿ ಮೂವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

ಕುಮಟಾ ತಾಲೂಕಿನಲ್ಲಿಂದು ಐದು ಕೇಸ್:

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 5 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕುಮಟಾದ ದೇವಗುಂಡಿ, ಬಾಡ, ಗೋಕರ್ಣ ಮುಂತಾದ ಪ್ರದೇಶದಲ್ಲಿ ಇಂದು ಸೋಂಕಿತ ಪ್ರಕರಣ ಪತ್ತೆಯಾಗಿದೆ. ಕುಮಟಾ ತಾಲೂಕಿನ ದೇವಗುಂಡಿಯ 34 ವರ್ಷದ ಮಹಿಳೆ, ದೇವಗುಂಡಿಯ 33 ವರ್ಷದ ಪುರುಷ, ಕುಮಟಾದ 34 ವರ್ಷದ ಪುರುಷ, ಬಾಡದ 48 ವರ್ಷದ ಮಹಿಳೆ, ಗೋಕರ್ಣದ 46 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇಂದಿನ 5 ಪ್ರಕರಣ ಸೇರಿ ಇದುವರೆಗೆ ಕುಮಟಾ ತಾಲೂಕಾ ವಾಪ್ತಿಯಲ್ಲಿ ಸೋಂಕಿತರ ಸಂಖ್ಯೆ 420 ರ ಗಡಿ ದಾಡಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ, ಕುಮಟಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Exit mobile version