ಮಾಹಿತಿ
Trending

ತಾಲೂಕಿನಲ್ಲಿ ಇಂದು 6 ಕರೊನಾ ಕೇಸ್ : ಬಿಡುಗಡೆ 13+8

[sliders_pack id=”1487″]

ಅಂಕೋಲಾ : ತಾಲೂಕಿನಲ್ಲಿಂದು ಒಟ್ಟೂ 6 ಕರೊನಾ ಪ್ರಕರಣಗಳು ಖಚಿತವಾಗಿದೆ. ಅವುಗಳಲ್ಲಿ 2 ಪ್ರಕರಣಗಳು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಬೇರೆ ಬೇರೆ ಕಾರಣಗಳಿಂದ ಚಿಕಿತ್ಸೆಗೆ ತೆರಳಿದ್ದ ತಾಲೂಕಿನ ಮೂಲದವರಲ್ಲಿ ಧೃಡಪಟ್ಟಿದೆ. ತಾಲೂಕಿನ ಉಳಿದ 4 ಪ್ರಕರಣಗಳಲ್ಲಿ 2 ಪ್ರಕರಣಗಳು ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ವ ಇದ್ದು, ಮತ್ತೆರಡು ಪ್ರಕರಣಗಳು ಜ್ವರಲಕ್ಷಣಗಳಿಂದ ಕೂಡಿದ(ಐ.ಎಲ್.ಐ) ಮಾದರಿ ಎನ್ನಲಾಗಿದೆ.

ಶನಿವಾರ ಒಟ್ಟೂ 61 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿನಿಂದ ಮುಕ್ತರಾದ 13 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, 8 ಜನರನ್ನು ಹೋಮ್ ಐಸೋಲೇಶನ್‍ನಲ್ಲಿಡಲಾಗಿದೆ. 58 ಪ್ರಕರಣಗಳು ಸಕ್ರೀಯವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button