ಮಾಹಿತಿ
Trending

ಕುಮಟಾ ಬಂದರಿನಲ್ಲಿ ಸ್ವಚ್ಛತಾ ಕಾರ್ಯಕ್ರಮ: ಅರ್ಥಪೂರ್ಣ ಗಾಂಧಿಜಯoತಿ ಆಚರಣೆ

ಕುಮಟಾ: ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಕುಮಟಾದ ಹೆಡ್ ಬಂದರಿನ ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ವಚ್ಛತಾ ಅಭಿಯಾನದಲ್ಲಿ ಲೈನ್ಸ್ ಕ್ಲಬ್ ಕುಮಟಾದವರು ಪಾಲ್ಗೊಂಡಿದ್ದರು. ಪುರಸಭೆ ಹಾಗೂ ಕಚೇರಿ ಸಿಬ್ಬಂದಿಗಳು ಜೊತೆಗೂಡಿ ಸಮುದ್ರ ತೀರದ ತ್ಯಾಜ್ಯಗಳನ್ನು ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಿದರು.


ಇದಕ್ಕೂ ಮೊದಲು ಪುರಸಭೆ ಕಾರ್ಯಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಸಹಾಯಕ ಆಯುಕ್ತ ಅಜಿತ್ ಎಮ್ ,ತಹಸೀಲ್ದಾರ್ ಮೇಘರಾಜ ನಾಯ್ಕ್,ಪುರಸಭೆ ಮುಖಾಧಿಕಾರಿಗಳಾದ ಎಂ.ಕೆ ಸುರೇಶ್, ಲೈಯನ್ಸ್ ಅಧ್ಯಕ್ಷೆ ವಿನಯಾ ಹೆಗಡೆ, ಕಾರ್ಯದರ್ಶಿ ಎಸ್.ಎಸ್.ಹೆಗಡೆ , ಪುರಸಭೆ ನೌಕರರು, ಪಿ.ಡಬ್ಲೂ. ಡಿ ಸಿಬ್ಬಂದಿ, ಹಲವು ಸ್ವಯಂಸೇವಾ ಸಂಸ್ಥೆಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.


ವಿಸ್ಮಯ ನ್ಯೂಸ್, ಕುಮಟಾ

Back to top button