Join Our

WhatsApp Group
ಮಾಹಿತಿ
Trending

ಉತ್ತರ ಕನ್ನಡದಲ್ಲಿಂದು 115 ಪಾಸಿಟಿವ್: 649 ಮಂದಿ ಗುಣಮುಖರಾಗಿ ಬಿಡುಗಡೆ

ಜಿಲ್ಲೆಯ ವಿವಿಧೆಡೆ 649 ಮಂದಿ ಗುಣಮುಖರಾಗಿ ಡಿಸ್ಚಾರ್ಜ್
ಭಾನುವಾರ ಜಿಲ್ಲೆಯಾದ್ಯಂತ ಮೂವರ ಸಾವು
1,365 ಸಕ್ರೀಯ ಪ್ರಕರಣ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 115 ಕರೊನಾ ಕೇಸ್ ದಾಖಲಾಗಿದೆ. ಕಾರವಾರದಲ್ಲಿ 11, ಅಂಕೋಲಾ 2, ಕುಮಟಾ 55, ಶಿರಸಿ 1, ಸಿದ್ದಾಪುರ 7, ಯಲ್ಲಾಪುರ 1, ಹಳಿಯಾಳದಲ್ಲಿ 37 ಮತ್ತು ಜೋಯ್ಡಾದಲ್ಲಿ 1 ಕೇಸ್ ದೃಢಪಟ್ಟಿದೆ.

ಜಿಲ್ಲೆಯಾದ್ಯಂತ ಮೂವರ ಸಾವು:

ಜಿಲ್ಲೆಯಲ್ಲಿ ಇಂದು ಕರೊನಾದಿಂದಾಗಿ ಮೂವರು ಮೃತಪಟ್ಟಿದ್ದು, ಇದರಿಂದಾಗಿ ಮೃತರ ಸಂಖ್ಯೆ 135ಕ್ಕೆ ಏರಿಕೆಯಾಗಿದೆ. ಕುಮಟಾ, ಯಲ್ಲಾಪುರ ಮತ್ತು ಮುಂಡಗೋಡಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ ಇಂದು 649 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕಾರವಾರ 30, ಅಂಕೋಲಾ 26, ಕುಮಟಾ 63, ಹೊನ್ನಾವರ 115, ಭಟ್ಕಳ 40, ಶಿರಸಿ 175, ಯಲ್ಲಾಪುರ 44, ಮುಂಡಗೋಡ 74 ಮತ್ತು ಹಳಿಯಾಳದಲ್ಲಿ 65 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 1,365 ಸಕ್ರೀಯ ಪ್ರಕರಣಗಳಿದ್ದು, 790 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂಕೋಲಾದಲ್ಲಿಂದು ಕೊವಿಡ್ ರಿಲೀಪ್ : ಗುಣಮುಖ 6 : ಸಕ್ರಿಯ 82

ಅಂಕೋಲಾ : ಭಾನುವಾರದ ಬಿಡುವು ಎಂಬಂತೆ ತಾಲೂಕಿನಲ್ಲಿಂದು ಯಾವುದೇ ಹೊಸ ಕೊರೊನಾ ಕೆಸ್‍ಗಳು ಪತ್ತೆಯಾಗದೇ, ಬಹುದಿನಗಳಿಂದ ಆತಂಕ ಹಾಗೂ ಒತ್ತಡದಲ್ಲಿದ್ದ ಕೆಲ ಸಾರ್ವಜನಿಕರು ಮತ್ತು ಸಂಬಂಧಿಸಿದ ಇಲಾಖೆಗಳ ಪಾಲಿಗೆ ಕೊವಿಡ್ ರಿಲೀಪ್ ದೊರೆತಂತಾಗಿದೆ. ಸೋಂಕು ಮುಕ್ತರಾದ 6 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಒಟ್ಟೂ 82 ಸಕ್ರಿಯ ಪ್ರಕರಣಗಳಿವೆ.

ಸ್ವ್ಯಾಬ್ ಟೆಸ್ಟ್ : ಬೆಳಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 77 ಆರ್‍ಟಿಪಿಸಿಆರ್, ತಾಲೂಕ ಆಸ್ಪತ್ರೆಯಲ್ಲಿ 1 ರ್ಯಾಟ್ ಮತ್ತು 5 ಆರ್‍ಟಿಪಿಸಿಆರ್ ಟೆಸ್ಟ್ ಸೇರಿದಂತೆ ತಾಲೂಕಿನಲ್ಲಿ ಒಟ್ಟೂ 83 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button