
102 ಮಂದಿ ಗುಣಮುಖರಾಗಿ ಬಿಡುಗಡೆ
ಕುಮಟಾ ತಾಲೂಕಿನಲ್ಲೇ ನಾಲ್ವರ ಸಾವು
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 72 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರ 12, ಅಂಕೋಲಾ 4, ಕುಮಟಾ 8, ಹೊನ್ನಾವರ 10, ಭಟ್ಕಳ 4, ಶಿರಸಿ 3, ಸಿದ್ದಾಪುರ 5, ಯಲ್ಲಾಪುರ 2, ಮುಂಡಗೋಡಿನಲ್ಲಿ 24 ಕೇಸ್ ದಾಖಲಾಗಿದೆ.
ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 102 ಮಂದಿ ಗುಣಮುಖರಾಗಿದ್ದಾರೆ. ಕಾರವಾರ 10, ಅಂಕೋಲಾ 8, ಕುಮಟಾ 27, ಹೊನ್ನಾವರ 7, ಭಟ್ಕಳ 1, ಶಿರಸಿ 12, ಸಿದ್ದಾಪುರ 2, ಮುಂಡಗೋಡ 28, ಹಳಿಯಾಳ 5 ಮತ್ತು ಜೋಯ್ಡಾದಲ್ಲಿ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ.
ಇಂದು ಜಿಲ್ಲೆಯಲ್ಲಿ ನಾಲ್ಕು ಸಾವಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ಕುಮಟಾ ತಾಲೂಕಿನಲ್ಲೇ ಇಂದು ನಾಲ್ವರು ಮೃತಪಟ್ಟಿದ್ದಾರೆ. ಇಂದು 72 ಕೇಸ್ ದೃಢಪಟ್ಟ ಬೆನ್ನಲ್ಲೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11,705 ಕೇಸ್ ದಾಖಲಾಗಿದೆ. 646 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಕ್ಕನ ಅಂತಿಮ ಕಾರ್ಯ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ತಮ್ಮನ ದುರ್ಮರಣ: ಏನಾಯ್ತು ನೋಡಿ?
- ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯಿಂದ ಮಹತ್ವದ ಹೇಳಿಕೆ : ಮೀನುಗಾರಿಕಾ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದಾಗಿ ಬಂದು ಅಹವಾಲು ಆಲಿಸಲು ಆಗ್ರಹ
- ರೈತರಿಗೆ ಬೆಳೆವಿಮೆ ಕೊಡಿ: ಕಂಪೆನಿಗೆ ಕೇಂದ್ರದ ಖಡಕ್ ಆದೇಶ
- ಗೋವಿಂದಮೂರ್ತಿ ದೇವರ ವರ್ಧಂತಿ: ಗಮನಸೆಳೆದ “ಶ್ರೀನಿವಾಸ ಕಲ್ಯಾಣ” ಪೌರಾಣಿಕ ನಾಟಕ
- ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ನಾಗರಹಾವು : ಕುಟುಂಬಸ್ಥರು, ಅಕ್ಕಪಕ್ಕದ ಮನೆಯವರಲ್ಲಿ ಆತಂಕ