ಗೋಕರ್ಣದಲ್ಲಿ ನವರಾತ್ರಿ ಉತ್ಸವ ಸಂಪನ್ನ:ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿ ಹೊಸ ಪಲ್ಲಕ್ಕಿ ಸಮರ್ಪಣೆ

ಗೋಕರ್ಣ: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ  ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಶ್ರೀ ದುರ್ಗಾಪರಮೇಶ್ವರಿ ಸಾನ್ನಿಧ್ಯದಲ್ಲಿ ದಿನಾ೦ಕ  17-10-2020 ಶನಿವಾರದಿಂದ  25-10-2020 ರವಿವಾರದವರೆಗೆ ಶಾರ್ವರಿ ಸಂವತ್ಸರದ ನವರಾತ್ರಿ ಉತ್ಸವವು  ಜರುಗಿದವು.

ದಿನಾ೦ಕ 25-10-2020 ರವಿವಾರ ಶ್ರೀ ಮಹಾಬಲೇಶ್ವರ ದೇವರ  ವಿಜಯೋತ್ಸವ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಾರ್ವಭೌಮ ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿ ಹೊಸ ಪಲ್ಲಕ್ಕಿ ಸಮರ್ಪಣೆ ಮಾಡಿದರು. ಇಂದು ಅದೇ ಹೊಸ ಪಲ್ಲಕ್ಕಿಯಲ್ಲಿ ವಿಜಯೋತ್ಸವವು ಜರುಗಿತ್ತು.  

ಉತ್ಸವವು ಬಿರುದು-ಬಾವಲಿ, ವಾದ್ಯ ಸಮೇತ ಶ್ರೀ ಭದ್ರಕಾಳಿ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸ್ವೀಕರಿಸಿ,
ಅಲ್ಲಿಂದ ಸ್ವಲ್ಪ ದೂರದಲ್ಲಿ ನಿಗದಿತ ಸ್ಥಳದಲ್ಲಿ ಕುಳಿತು ಪೂಜೆ ಸ್ವೀಕರಿಸಿ, ‘ಬನ್ನಿ’ ಪ್ರಸಾದ ವಿತರಿಸಿ, ಮರಳಿ ಶ್ರೀ ದೇವಾಲಯಕ್ಕೆ ತಲುಪಿದೆ.

ಭಕ್ತಾದಿಗಳು ಈ ಎಲ್ಲ ಪೂಜೆ, ಉತ್ಸವಗಳಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ  ಶ್ರೀ ದೇವರ ಕೃಪೆಗೆ ಪಾತ್ರರಾದರು . ಶ್ರೀದೇವಾಲಯದಲ್ಲಿ ಇಂದು ನವರಾತ್ರಿ ಕೂಡ ವಿಜಯೋತ್ಸವದ ಆಚರಣೆಯ ಮುಖಾಂತರ ಸಂಪನ್ನವಾಯಿತು.

ಪ್ರಧಾನಅರ್ಚಕರಾದ ವೇ.ಮೂ. ಕೃಷ್ಣಭಟ್ ಷಡಕ್ಷರಿ ಅವರ ನೇತೃತ್ವದಲ್ಲಿ ಈ ಒಂಬತ್ತು ದಿನಗಳ ಕಾಲ ವಿಜ್ರಂಭಣೆಯಿಂದ ಜರುಗಿದವು. ಇಂದು ಅರ್ಚಕರಾದ ವೇ.ಮೂ ಶಿವ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು.

ವಿಸ್ಮಯ ನ್ಯೂಸ್ ಗೋಕರ್ಣ

Exit mobile version