
ಹೊನ್ನಾವರ: ತಾಲೂಕಿನಲ್ಲಿ ಇತ್ತಿಚೆಗೆ ಕಳ್ಳತನ ಪ್ರಕರಣ ಹೆಚ್ಚುತ್ತಿದೆ. ಭಟ್ಕಳ, ಅಂಕೋಲಾ, ಕುಮಟಾ, ಹೊನ್ನಾವರ ಸೇರಿದಂತೆ ಹಲವೆಡೆ ಕಳ್ಳರು ತಮ್ಮ ಕೈಚಳಕ ತೋರುತ್ತಲೇ ಇದ್ದಾರೆ. ಈಗ ಹೊನ್ನಾವರ ತಾಲೂಕಿನ ಕಾಸರಕೋಡದ ದೇವಸ್ಥಾನವೊಂದರ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ದೇವರ ಕೊರಳಿನಲ್ಲಿದ್ದ ಸರವನ್ನೇ ಕದ್ದೊಯ್ದಿದ್ದಾರೆ.
ಹೌದು, ತಾಲೂಕಿನ ಕಾಸರಕೋಡ ಹಿರೆಮಠ ವೀರ ಮಾರುತಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ದೇವಸ್ಥಾನದ ಕಾಣಿಕೆ ಹುಂಡಿಯ ಅಂದಾಜು 7 ಸಾವಿರ ನಗದು, ದೇವರ ಕೊರಳಿನ 20 ಗ್ರಾಂ ತೂಕದ 80 ಸಾವಿರ ಮೌಲ್ಯದ ಬಂಗಾರದ ಸರವು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪಿಎಸೈ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ