Uttara Kannada
Trending

ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯಜಮಾನ : ಬಡಕುಟುಂಬಕ್ಕೆ ಬೇಕಿದೆ ಆರ್ಥಿಕ ನೆರವು

  • ಚಿಕ್ಕ ಹೆಣ್ಣುಮಕ್ಕಳಿರುವ ಕುಟುಂಬ ನಿರ್ವಹಣೆಗೆ ಭವಿಷ್ಯದ ಚಿಂತೆ?
  • ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾ ವಣೆ ಮಾಡಿ ನೆರವು ನೀಡಲು ಕುಟುಂಬದವರ ಮನವಿ

ಅಂಕೋಲಾ : ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಯಜಮಾನನಿಗೆ ಒಕ್ಕರಿಸಿದ ಕ್ಯಾನ್ಸರ್ ಪೀಡೆಯಿಂದಾಗಿ ಬಡಕುಟುಂಬವೊoದು ಸಂಕಷ್ಟದಲ್ಲಿದ್ದು, ಮಾನವೀಯ ತುರ್ತು ನೆರವಿನ ಅವಶ್ಯಕತೆ ಇದೆ.


ತಾಲೂಕಿನ ಮಾದನಗೇರಿ-ಬಳಲೆ ವ್ಯಾಪ್ತಿಯ ಗಣಪತಿ ಹನುಮಂತ ನಾಯ್ಕ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇದ್ದು ಬಡಕುಟುಂಬದಿoದ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಿಲ್ಲದಂತಾಗಿದೆ. ಸಂಸಾರ ನಿರ್ವಹಣೆ ಮಾಡಬೇಕಾದ ಮನೆಯ ಯಜಮಾನನೇ ಹಾಸಿಗೆ ಹಿಡಿದಿರುವುದು, ಚಿಕ್ಕ ಇಬ್ಬರು ಹೆಣ್ಣು ಮಕ್ಕಳಿರುವ ಕುಟುಂಬದಲ್ಲಿ ನೋವು ಮತ್ತು ಅಸಹಾಯಕತೆಯ ಅನಾಥ ಪ್ರಜ್ಞೆ ಕಾಡುವಂತೆ ಮಾಡಿದ್ದು, ಮುಂದೇನು? ಎಂಬ ಭವಿಷ್ಯದ ಚಿಂತೆಯಲ್ಲಿ ದುಃಖ ತಪ್ತರನ್ನಾಗಿಸಿದೆ.


ಈ ಬಡಕುಟುಂಬಕ್ಕೆ ಉದಾರ ದಾನ ನೀಡಿ ಮಾನವೀಯ ನೆರವು ನೀಡಬೇಕಿದೆ. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತಿತರ ದಾನಿಗಳು ಹೆಚ್ಚಿನ ನೆರವು ನೀಡಿ, ಬಡಕುಟುಂಬದ ಸಂಕಷ್ಟ ಪರಿಹರಿಸಲು ಕೈ ಜೋಡಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಕುಟುಂಬ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ(8971692088).

ಗಣಪತಿ ಹನುಮಂತ ನಾಯ್ಕ
ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್)
ಮಾದನಗೇರಿ ಶಾಖೆ,
IFSC NO : BARB0VJMAUT
A/C. NO. : 64530100017675.

ಗಣಪತಿ ನಾಯ್ಕ ಅವರ ಆಧಾರ್ ಕಾರ್ಡ್
ಗಣಪತಿ ನಾಯ್ಕ ಅವರ ಬ್ಯಾಂಕ್ ಖಾತೆಯ ಪಾಸ್ ಬುಕ್

ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ

Back to top button