Uttara Kannada
Trending

11 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ ಮೂವರ ಶವ ಹೊಳೆಯಲ್ಲಿ ಪತ್ತೆ: ಆತ್ಮಹತ್ಯೆ ಶಂಕೆ

ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಲಗೊಡ್ಲುವಿನಲ್ಲಿ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗ ಭಾನುವಾರ ಗಣೇಶ್ ಪಾಲ್ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತಪಟ್ಟವರನ್ನು ಹಿತ್ಲಳ್ಳಿ ಕಲಗೊಡ್ಲುವಿನ ರಾಜೇಶ್ವರಿ ನಾರಾಯಣ ಹೆಗಡೆ(52), ವಾಣಿ ಪ್ರಕಾಶ್ ವೈ.(28), ಹಾಗೂ ವಾಣಿಯ ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ.


ಕಳೆದ 20 ರಂದು ಶುಕ್ರವಾರ ಇವರು ಮನೆಯಿಂದ ಕಾಣೆಯಾಗಿದ್ದರು. ಅಲ್ಲಿ ಇಲ್ಲಿ ಹುಡುಕಾಡಿದ ಇವರ ಮನೆಯವರು ದೂರು ನೀಡಲು ಭಾನುವಾರ ಯಲ್ಲಾಪುರ ಪೊಲೀಸ್ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಗಣೇಶ್‌ಪಾಲ್ ಹೊಳೆಯಲ್ಲಿ ಮೃತದೇಹ ದೊರಕಿರುವ ಕುರಿತುಮಾಹಿತಿ ಲಭಿಸಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದ್ದು, ಯಲ್ಲಾಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Related Articles

Back to top button